ಹೊನ್ನಟಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಮುಖ್ಯಶಿಕ್ಷಕ ಸಂಗಮೇಶ ಗಬ್ಬೂರು, ಶಿಕ್ಷಕರಾದ ಬಸನಗೌಡ, ಜ್ಯೋತಿ, ಶಿಲ್ಪಾ ಮಾಲೆ, ಶಾಂತಕುಮಾರ ಇತರರಿದ್ದರು. 
ರಾಯಚೂರು

ಸರ್ಕಾರಿ ಶಾಲೆ ಉಳಿವಿಗೆ ಸಹಕಾರ ಅಗತ್ಯ

ದೇವದುರ್ಗ: ಇಂಗ್ಲಿಷ್ ಮಾಧ್ಯಮ ಹಾಗೂ ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳಿಗೆ ಸಂಕಷ್ಟ ಎದುರಾಗಿದೆ. ಕನ್ನಡ ಶಾಲೆಗಳ ಉಳಿವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಶಾಂತಕುಮಾರ ಹೇಳಿದರು. 
ತಾಲೂಕಿನ ಹೊನ್ನಟಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 7ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. 
ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಪಾಲಕರು ಕನ್ನಡ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಬೇಕು.  
ತಂದೆತಾಯಿ ಕನಸು ನನಸು ಮಾಡಬೇಕು ಎಂದರು. ನಂತರ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು. ಮುಖ್ಯಶಿಕ್ಷಕ ಸಂಗಮೇಶ ಗಬ್ಬೂರು, ಶಿಕ್ಷಕರಾದ ಬಸನಗೌಡ, ಜ್ಯೋತಿ, ಶಿಲ್ಪಾ ಮಾಲೆ, ಮುಖಂಡರಾದ ಸೂಗಪ್ಪಗೌಡ, ಸಾಬಣ್ಣ ಮಾನಸಗಲ್, ಕಮಲ್ ರಾಠೋಡ್, ಗಂಗಪ್ಪ, ನರಸಪ್ಪ, ಹುಲಗಪ್ಪ ಇತರರಿದ್ದರು.