ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ, ಆನಂದ ಕುಂಬಾರ, ಹನುಮಗೌಡ, ಬಸಣ್ಣ ಕೋಠಾ, ರಾಮಣ್ಣ ಗುರುಗುಂಟಾ ಇತರರಿದ್ದರು. 
ರಾಯಚೂರು

ನಾರಾಯಣಪುರ ಬಲದಂಡೆ ನಾಲೆಗೆ ನಿರಂತರ ನೀರು ಹರಿಸಿ

ಪ್ರಮುಖ ಮುಖ್ಯಾಂಶಗಳು

  • ಲಿಂಗಸುಗೂರಿನಲ್ಲಿ ಎಸಿಗೆ ರೈತ ಸಂಘ-ಹಸಿರು ಸೇನೆ ಮನವಿ
ಲಿಂಗಸುಗೂರು : ನಾರಾಯಣಪುರ ಬಲದಂಡೆ ನಾಲೆ, ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಏಪ್ರಿಲ್ ಕೊನೇ ವಾರದವರೆಗೆ ನಿರಂತರ ನೀರು ಹರಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ಈ ಬಾರಿ ಅತಿಹೆಚ್ಚು ಮಳೆಯಾಗಿದ್ದರಿಂದ ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹಿಂಗಾರು ಹಂಗಾಮಿಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಮುಂಚಿತವಾಗಿ ಬಿತ್ತನೆ ಮಾಡಲಾಗಿದೆ. ಬೆಳೆ ಕೈಗೆ ಬರಲು ತಡವಾಗುತ್ತದೆ. ಆದ್ದರಿಂದ ಏಪ್ರಿಲ್ ಕೊನೇ ವಾರದವರೆಗೆ ನೀರು ಹರಿಸಿದರೆ ಬೆಳೆ ಕೈ ಸೇರುತ್ತದೆ. ಇಲ್ಲದಿದ್ದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ನೀರು ಹರಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಬಸಣ್ಣ ಕೋಠಾ, ರಾಮಣ್ಣ ಗುರುಗುಂಟಾ, ನಾಗಪ್ಪ ಪುನೇದ, ನಾನಿರೆಡ್ಡಿ, ಮಹ್ಮದ ಸಾಬ್, ಲಾಲ್‌ಸಾಬ್, ಹನುಮಂತ ಪೈದೊಡ್ಡಿ, ಮೌಲಾಸಾಬ್, ಹುಲಗಪ್ಪ, ಮುದಿಯಪ್ಪ, ಹೊಳೆಪ್ಪ, ಆದಪ್ಪ ಜೋತೇರ್, ಭೀಮಪ್ಪ, ನಾಗಪ್ಪ, ಹನುಮಂತ ಯರಜಂತಿ, ಕನಕಪ್ಪ, ಅಮರಪ್ಪ ಗೋಸ್ಲೇರ, ಖಾದರಸಾಬ್ ಇತರರಿದ್ದರು.