ಲಿಂಗಸುಗೂರಿನಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಬೈಪಾಸ್ ರಸ್ತೆ ಬದಿ ವ್ಯಾಪಾರಿಗಳು ಮನವಿ ಸಲ್ಲಿಸಿದರು. ವ್ಯಾಪಾರಿಗಳಾದ ಅಮರೇಶ ಮಡಿವಾಳ, ಅಲ್ಲಾಬಕ್ಷಾ, ಅಮರೇಶ ಕನ್ನಾಳ, ಈರಣ್ಣ ಗುಡಿಹಾಳ, ಗುರುರಾಜ ಇತರರಿದ್ದರು.
ಲಿಂಗಸುಗೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಬೈಪಾಸ್ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಪಡಿಸಿ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ, ಮೆಡಿಕಲ್, ಕಿರಾಣಿ ಅಂಗಡಿಗಳ ವ್ಯಾಪಾರಸ್ಥರು ಶುಕ್ರವಾರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಬೆಂಗಳೂರು ಬೈಪಾಸ್ ಸರ್ವೀಸ್ ರಸ್ತೆ ಕಾಮಗಾರಿ ಈವರೆಗೆ ಮುಗಿದಿಲ್ಲ. ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಆಸ್ಪತ್ರೆ, ಔಷಧ, ಕಿರಾಣಿ ಅಂಗಡಿಗಳು ಹಾಗೂ ಇತರ ಅಂಗಡಿಗಳಿಗೆ ಗ್ರಾಹಕರು ಬರಲು ಸಮಸ್ಯೆಯಾಗಿದೆ.
ಸರ್ವೀಸ್ ರಸ್ತೆ ಅಪೂರ್ಣಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಅಪಘಾತಗಳು ನಡೆದಿವೆ. ಈ ಬಗ್ಗೆ ಎರಡ್ಮೂರು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವ್ಯಾಪಾರಿಗಳಾದ ಅಮರೇಶ ಮಡಿವಾಳ, ಅಲ್ಲಾಬಕ್ಷಾ, ಅಮರೇಶ ಕನ್ನಾಳ, ಈರಣ್ಣ ಗುಡಿಹಾಳ, ಗುರುರಾಜ, ಅಮರೇಶ, ಶಿವಪ್ರಸಾದ, ಯಂಕೋಬ ಇತರರಿದ್ದರು.