ಗುರುಗುಂಟಾ ಗ್ರಾಮದ ಮಲತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಸ್ಥಳಕ್ಕೆ ಜಿಪಂ ಸಿಇಒ ಈಶ್ವರ ಕಾಂದೂ ಭೇಟಿ ನೀಡಿ ಪರಿಶೀಲಿಸಿದರು. ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪರಮೇಶ್ವರ ಟೆಂಗಳಿಕರ್, ತಾಪಂ ಇಒ ಉಮೇಶ, ಎಡಿ ವೆಂಕಟೇಶ ದೇಸಾಯಿ, ಪಂಪನಗೌಡ ಪಾಟೀಲ್, ಯೋಜನಾಧಿಕಾರಿ ಮಹಾದೇವಪ್ಪ, ಹನುಮಗೌಡ ಇದ್ದರು. 
ರಾಯಚೂರು

ಎಸ್‌ಎಸ್‌ಟಿಪಿ ಕಾಮಗಾರಿ ಬೇಗ ಪೂರ್ಣಗೊಳಿಸಿ

ನರೇಶ್ ಕುಮಾರ್
ಲಿಂಗಸುಗೂರು: ತಾಲೂಕಿನ ಗುರುಗುಂಟಾ ಗ್ರಾಮದ ಮಲತ್ಯಾಜ್ಯ ವಿಲೇವಾರಿ ಘಟಕ (ಎಸ್‌ಎಸ್‌ಟಿಪಿ) ಕಟ್ಟಡ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳು, ಗುತ್ತಿಗೆದಾರರಿಗೆ ರಾಯಚೂರು ಜಿಪಂ ಸಿಇಒ ಈಶ್ವರ ಕಾಂದೂ ಸೂಚನೆ ನೀಡಿದರು. 
ಗುರುಗುಂಟಾ ಗ್ರಾಮದ ಘನ ತ್ಯಾಜ್ಯ ಹಾಗೂ ಮಲ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಬಾಟಲ್‌ಗಳು, ಪ್ಲಾಸ್ಟಿಕ್ ತ್ಯಾಜ್ಯ ಪ್ರತ್ಯೇಕವಾಗಿ ವಿಂಗಡಿಸಬೇಕು ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪರಮೇಶ್ವರ ಟೆಂಗಳಿಕರ್, ಪಿಡಿಒ ಶಿವರಾಜ, ಗುತ್ತಿಗೆದಾರ ಪ್ರಶಾಂತಗೆ ತಾಕೀತು ಮಾಡಿದರು.
ತಾಪಂ ಇಒ ಉಮೇಶ, ಎಡಿ ವೆಂಕಟೇಶ ದೇಸಾಯಿ, ಪಂಪನಗೌಡ ಪಾಟೀಲ್, ಯೋಜನಾಧಿಕಾರಿ ಮಹಾದೇವಪ್ಪ, ಹನುಮಗೌಡ, ಐಇಸಿ ಸಂಯೋಜಕ ಬಾಲಪ್ಪ, ಜಾವೀದ್‌ಪಾಷಾ, ಅಜೀಂ ಪಾಷಾ, ಅರುಣಕುಮಾರ, ಪಿಡಿಒ ಶಿವಪ್ಪ ಇತರರಿದ್ದರು.