ಅರಕೇರಾದ ಸರ್ಕಾರಿ ಮಾಹಿಪ್ರಾ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಮಾನಸಯ್ಯ ಪೂಜಾರಿ, ಸಿಆರ್‌ಪಿ ಬಸವರಾಜ, ಸಿಆರ್‌ಪಿ ಬಸವರಾಜ, ಮುಖ್ಯಶಿಕ್ಷಕಿ ಯಲ್ಲಮ್ಮ, ಸಹಶಿಕ್ಷಕ ಲಕ್ಷ್ಮಣ ಇತರರಿದ್ದರು. ’ 
ರಾಯಚೂರು

ಪೂರಕ ಶೈಕ್ಷಣಿಕ ವಾತಾವರಣ

ಶಾಮಸುಂದರ್ ಕೊಪ್ಪಳಕರ್
ಅರಕೇರಾ: ಬಡ ಮಕ್ಕಳಿಗಾಗಿ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮಾನಸಯ್ಯ ಪೂಜಾರಿ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಸೋಮವಾರ ಮಾತನಾಡಿದರು.
ಬಡಮಕ್ಕಳಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಸರ್ಕಾರಿ ಶಾಲೆ ತೆರೆದ ದೇಗುಲವಿದ್ದಂತೆ. ಇಲ್ಲಿ ಕಲಿತ ಅಕ್ಷರ, ಜ್ಞಾನ, ಆಟೋಟ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲದೇ ಖಾಸಗಿ ಶಾಲೆಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಪೂರಕ ಶೈಕ್ಷಣಿಕ ವಾತಾವರಣವಿದೆ. ಅಲ್ಲದೇ ಬಿಸಿಯೂಟ, ಪಠ್ಯಪುಸ್ತಕ, ಹಾಲು, ಮೊಟ್ಟೆ, ಸಮವಸ್ತ್ರ ಎಲ್ಲವೂ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಸಿಆರ್‌ಪಿ ಬಸವರಾಜ, ಮುಖ್ಯಶಿಕ್ಷಕಿ ಯಲ್ಲಮ್ಮ, ಸಹಶಿಕ್ಷಕ ಲಕ್ಷ್ಮಣ, ಪ್ರಮುಖರಾದ ನಾಗರಾಜ ದೇವರಮನಿ, ಸಿದ್ದಲ್ಲ, ಸಲೀಂ, ವೀರಭದ್ರ, ಶಾಲಂ, ಸಲೀಂ ಸಾಬ್, ಹನುಮಂತ್ರಾಯ, ಬಸವರಾಜ, ಚನ್ನಪ್ಪ, ಜ್ಯೋತಿ, ಲಕ್ಷ್ಮೀ ಇತರರಿದ್ದರು.