ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು. 
ರಾಯಚೂರು

ಕೊಲೊಸ್ಟ್ರಮ್ ಲಸಿಕೆಯಂತೆ ಕಾರ್ಯನಿರ್ವಹಣೆ

ಅಶೋಕ್ ಕುಮಾರ್ ಎನ್

ಮುದಗಲ್: ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಭಾನುವಾರ ಜಾಗೃತಿ ಕಾರ್ಯಕ್ರಮ ನಡೆಯಿತು.

ಮುಖ್ಯ ವೈದ್ಯಾಧಿಕಾರಿ ಚಂದ್ರಕಾಂತ ಮಾತನಾಡಿ, ಶಿಶುವಿಗೆ ಮೊದಲ ಆರು ತಿಂಗಳವರೆಗೆ ಕೇವಲ ತಾಯಿಹಾಲು ನೀಡಬೇಕು. ಇದರಿಂದ ಶಿಶುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದರ ಜತೆಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗಿ ಆಗಲಿದೆ. ತಾಯಿಯ ಮೊದಲ ಹಳದಿ ಬಣ್ಣದ ಹಾಲು ಕೊಲೊಸ್ಟ್ರಮ್ ಶಿಶುವಿಗೆ ಪ್ರಕೃತಿಯ ಮೊದಲ ಲಸಿಕೆಯಂತಿದ್ದು, ವಿವಿಧ ಸೋಂಕುಗಳಿಂದ ರಕ್ಷಣೆ ನೀಡುತ್ತದೆ ಎಂದರು.

ವೈದ್ಯರಾದ ಅನಂತಕುಮಾರ, ವಿನೋದಕುಮಾರ ಮಾತನಾಡಿ, ಬಾಣಂತಿಯರು ಶಿಶುಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಆರೋಗ್ಯ ಶಿಕ್ಷಣಾಧಿಕಾರಿ ಶಾರದಾ, ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.