ಗಬ್ಬೂರು ಗ್ರಂಥಾಲಯಕ್ಕೆ ಪಂಚಾಯತ್‌ರಾಜ್ ಆಯುಕ್ತಾಲಯದ ನಿರ್ದೇಶಕ ಅಮರೇಶ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಉಪಕಾರ್ಯದರ್ಶಿ ನವೀನ್ ಕುಮಾರ್, ಸಂಶೋಧನಾಧಿಕಾರಿ ಶಶಿಧರ, ಜಿಪಂ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಬಸವರಾಜ ಹಟ್ಟಿ ಇದ್ದರು.
- ಪಂಚಾಯತ್‌ರಾಜ್ ಆಯುಕ್ತಾಲಯದ ನಿರ್ದೇಶಕ ಮೆಚ್ಚುಗೆ
ದೇವದುರ್ಗ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ತಾಲೂಕಿನ ಗಬ್ಬೂರು ಗ್ರಾಪಂಗೆ ಪಂಚಾಯತ್‌ರಾಜ್ ಆಯುಕ್ತಾಲಯದ ನಿರ್ದೇಶಕ ಅಮರೇಶ ನಾಯ್ಕ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೋಲಾರ್ ಜೆರಾಕ್ಸ್, ಪ್ರಿಂಟರ್ ಮಿಷನ್ ನೀಡಿದ್ದು ಉತ್ತಮ ಕೆಲಸ. ಗಬ್ಬೂರು ಗ್ರಂಥಾಲಯವನ್ನು ಗ್ರಾಪಂ ಸಹಯೋಗದಲ್ಲಿ ಡಿಜಿಟಲ್ ಲೈಬ್ರರಿ ಮಾಡಲಾಗಿದೆ. ಅನುದಾನ ಸಮರ್ಪಕ ಬಳಕೆ, ಸಮಗ್ರ ದಾಖಲೆ ನಿರ್ವಹಣೆ ಮಾಡಲಾಗಿದೆ.
ಈ ಕೆಲಸ ಹೀಗಿಯೇ ಮುಂದುವರಿಸಬೇಕು ಎಂದು ಅಮರೇಶ ನಾಯ್ಕ ಸೂಚನೆ ನೀಡಿದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪಕಾರ್ಯದರ್ಶಿ ನವೀನ್ ಕುಮಾರ್, ಸಂಶೋಧನಾಧಿಕಾರಿ ಶಶಿಧರ, ಜಿಪಂ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ತಾಪಂ ಇಒ ಬಸವರಾಜ್ ಹಟ್ಟಿ, ಪಿಡಿಒ ತಿರುಮಲರೆಡ್ಡಿ ಇದ್ದರು.