ಮುದಗಲ್‌ನಲ್ಲಿ ಮೂರು ರಾಯರ ಹಬ್ಬದ ಪ್ರಯುಕ್ತ ಕ್ರೈಸ್ತರಿಂದ ಕ್ರಿಸ್ತರ ಮೂರ್ತಿ ಮೆರವಣಿಗೆ ನಡೆಸಲಾಯಿತು.
ಮುದಗಲ್: ಪಟ್ಟಣದ ಕ್ರೈಸ್ತ ಸಮುದಾಯದಿಂದ ಬುಧವಾರ ಮೂರು ರಾಯರ ಹಬ್ಬ ಸಂಪನ್ನಗೊಳಿಸಲಾತು. ಪ್ರತಿ ವರ್ಷದಂತೆ ಮುದಗಲ್ ಚರ್ಚ್‌ನಲ್ಲಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಯ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಅಲಂಕೃತ ವಾಹನದಲ್ಲಿ ಕ್ರಿಸ್ತರ ಮೂರ್ತಿ, ಜಾತ್ರೆಯ ಸಂದೇಶ ಸಾರುವ ಪ್ರಸಂಗದ ಚಿತ್ರಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಚರ್ಚ್‌ನಲ್ಲಿ ಫಾ. ಪೊನ್ನುಸ್ವಾಮಿ ಅವರು, ಜಾತ್ರೆಯ ಮಹತ್ವ ಕುರಿತು ತಿಳಿಸಿದರು. ಮೆರವಣಿಗೆಯಲ್ಲಿ ಕ್ರೈಸ್ತರು ಮೊಂಬತ್ತಿ ಹಿಡಿದು ಭಜನಾ ಪದಗಳನ್ನು ಹಾಡಿದರು.
ಫಾ. ಅನಿಲ್ ಗಂಗಾವತಿ, ಪೌಲ್ ರಾಜ್ ಎಮ್ಮಿ, ಅನಿಲ್ ಕುನಪಲ್ಲಿ, ಅಶೋಕ ಹಾಗೂ ಕಡದರಾಳ, ಮುದಗಲ್, ಕೆ.ಮರಿಯಮ್ಮನಹಳ್ಳಿ, ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.