ಹೊನ್ನಟಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಶಾಂತಕುಮಾರ್, ಮುಖ್ಯಶಿಕ್ಷಕ ಎಂ.ಡಿ.ಸಾಬೀರ್, ಹುಲ್‌ಹಕ್, ಶಿಕ್ಷಕರಾದ ಬಸನಗೌಡ, ಜ್ಯೋತಿ ಪಾಟೀಲ್, ಶಿಲ್ಪಾ ಮಾಲೆ, ಪ್ರಭಾವತಿ ಇತರರಿದ್ದರು.
- ಆಯೋಜಿಸಿದ್ದ
- ಶಿಕ್ಷಕರ
- ದಿನಾಚರಣೆ
ದೇವದುರ್ಗ: ಶಿಕ್ಷಕರು ಸಮಾಜವನ್ನು ಮುನ್ನಡೆಸುವ ಮಾರ್ಗದರ್ಶಕರಾಗಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ಹೇಳಿದರು.
ಹೊನ್ನಟಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಕಟ್ಟುವ ನಾಯಕರು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾಗಿ ಅಕ್ಷರಭ್ಯಾಸ ಮಾಡಿಸಬೇಕು. ಮಕ್ಕಳ ಭವಿಷ್ಯ ಶಾಲೆಯ ನಾಲ್ಕು ಗೋಡೆಯ ಮಧ್ಯೆ ಅಡಗಿದೆ. ಅದನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.