ಗುಂಜಳ್ಳಿಯ ವಿದ್ಯಾರ್ಥಿ ಅಭಿಷೇಕ್ ಮೋತಿಲಾಲ್ ದೇಸಾಯಿ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್‌ನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ವಿತರಿಸಿದರು. ವಸತಿ ಶಾಲೆ ಪ್ರಾಚಾರ್ಯ ಮರಿಯಪ್ಪ ನಾಯಕ, ಹಾಸ್ಟೆಲ್ ಪ್ರಭಾರಿ ಮೇಲ್ವಿಚಾರಕ ರಮೇಶ ಸಜ್ಜನ್ ಇತರರಿದ್ದರು. 
ರಾಯಚೂರು

ಮೃತ ವಿದ್ಯಾರ್ಥಿ ಕುಟುಂಬಕ್ಕೆ ಚೆಕ್ ವಿತರಣೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಚೆಕ್ ವಿತರಣೆ

ಮೃತ ವಿದ್ಯಾರ್ಥಿ ಕುಟುಂಬಕ್ಕೆ ಚೆಕ್ ವಿತರಣೆ

ಸಿಂಧನೂರು: ಕಳೆದ ಆರು ತಿಂಗಳ ಹಿಂದೆ ನಡೆದ ದುರ್ಘಟನೆಯಲ್ಲಿ ತಾಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಗುಂಜಳ್ಳಿಯ 10ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ಮೋತಿಲಾಲ್ ದೇಸಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಗುಂಜಳ್ಳಿಯಲ್ಲಿ ಅವರ ಕುಟುಂಬಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂ. ಪರಿಹಾರದ ಚೆಕ್‌ನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ವಿತರಿಸಿದರು.
ನಂತರ ಮಾತನಾಡಿ, ವಿದ್ಯಾರ್ಥಿಯ ಅಕಾಲಿಕ ನಿಧನ ಕುಟುಂಬಕ್ಕೂ, ಶಾಲಾ ವಲಯಕ್ಕೂ ಅಪಾರ ನೋವುಂಟು ಮಾಡಿದ್ದು, ಅವರ ಕುಟುಂಬಕ್ಕೆ ನೆರವು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು ಎಂದರು. ವಸತಿ ಶಾಲೆಯ ಪ್ರಾಚಾರ್ಯ ಮರಿಯಪ್ಪ ನಾಯಕ, ಹಾಸ್ಟೆಲ್ ಪ್ರಭಾರಿ ಮೇಲ್ವಿಚಾರಕ ರಮೇಶ ಸಜ್ಜನ್ ಇತರರಿದ್ದರು.