ಒಳಬಳ್ಳಾರಿಯಲ್ಲಿ ಸುವರ್ಣಗಿರಿ ವಿರಕ್ತಮಠದ ಚನ್ನಬಸವ ಶಿವಯೋಗಿಗಳ ರಥೋತ್ಸವ ಅದ್ದೂರಿಯಾಗಿ ಜರುಗಿತು. 
ರಾಯಚೂರು

ಚನ್ನಬಸವ ಶಿವಯೋಗಿಗಳ ರಥೋತ್ಸವ ಅದ್ದೂರಿ

ಪ್ರಮುಖ ಮುಖ್ಯಾಂಶಗಳು

  • ಒಳಬಳ್ಳಾರಿ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ
  • ಸಹಸ್ರಾರು ಭಕ್ತರ ಜಯಘೋಷ
ಸಿಂಧನೂರು: ತಾಲೂಕಿನ ಒಳಬಳ್ಳಾರಿಯಲ್ಲಿ ಸುವರ್ಣಗಿರಿ ವಿರಕ್ತಮಠದ ಚನ್ನಬಸವ ಶಿವಯೋಗಿಗಳ 43ನೇ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಚನ್ನಬಸವ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಜಂಗಮ ವಟುಗಳಿಗೆ ಇಷ್ಟಲಿಂಗ ಅಯ್ಯಚಾರ ದೀಕ್ಷೆ ನೀಡಲಾಯಿತು.
ಸಂಜೆ ಚನ್ನಬಸವ ಶಿವಯೋಗಿಗಳ ರಥೋತ್ಸವಕ್ಕೆ ಕೊಟ್ಟೂರು ಸಂಸ್ಥಾನದಮಠದ ಜಗದ್ಗುರು ನಿರಂಜನ ಬಸವಲಿಂಗ ಸ್ವಾಮೀಜಿ, ಶ್ರೀಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ರಥ ಸಾಗುತ್ತಿದ್ದಂತೆ ಸಹಸ್ರಾರು ಭಕ್ತರಿಂದ ಜಯಘೋಷ ಮೊಳಗಿತು. ಹಾಲ್ವಿಯ ಅಭಿನವ ಮಹಾಂತ ಸ್ವಾಮೀಜಿ, ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ನಂದವಾಡಗಿ ಚನ್ನಬಸವ ಶಿವಾಚಾರ್ಯರು, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ದರೂರು ಕೊಟ್ಟೂರು ಸ್ವಾಮೀಜಿ, ಒಳಬಳ್ಳಾರಿ ಬಸವಲಿಂಗ ಸ್ವಾಮೀಜಿ, ಖೇಳಗಿ ಶಿವಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ, ನಿಡಗುಂದಿ ಅಭಿನವ ಚನ್ನಬಸವ ಸ್ವಾಮೀಜಿ, ಸೋಮನಾಥ ಶಿವಾಚಾರ್ಯರು, ಶಿವಯೋಗಿ ಶಿವಾಚಾರ್ಯರು, ಬಸವಭೂಷಣ ಸ್ವಾಮೀಜಿ, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್ಸಿ ಬಸನಗೌಡ ಬಾದರ್ಲಿ, ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮಾಜಿ ಸಚಿವ ವೆಂಕಟರಾವ ನಾಡಗೌಡ ಇತರರು ಭಾಗವಹಿಸಿದ್ದರು.