ಲಿಂಗಸುಗೂರು ತಾಲೂಕು ಕಚೇರಿ ಸಭಾಂಗಣದಲ್ಲಿ ನ್ಯಾಯಬೆಲೆ ಅಂಗಡಿ ಪರವಾನಗಿದಾರರ ಸಭೆಯಲ್ಲಿ ಆಹಾರ ನಿರೀಕ್ಷಕ ರಾಮಕೃಷ್ಣ ಮಾತನಾಡಿದರು. ಆಹಾರ ಶಿರಸ್ತೇದಾರ್ ಮಹಾಲಕ್ಷ್ಮೀ ಪಾಟೀಲ್ ಇದ್ದಾರೆ. 
ರಾಯಚೂರು

ಪಡಿತರ ಹಂಚಿಕೆಯಲ್ಲಿ ಬದಲಾವಣೆ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಮೇ-ಜೂನ್ ತಿಂಗಳ ಪಡಿತರ ಒಟ್ಟಿಗೆ ವಿತರಣೆ
ಲಿಂಗಸುಗೂರು: ಈ ತಿಂಗಳು ಪಡಿತರ ಧಾನ್ಯ ಹಂಚಿಕೆಯಲ್ಲಿ ಬದಲಾವಣೆ ಇರಲಿದ್ದು, ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರ ಜತೆ ಸಮನ್ವಯದಿಂದ ನಡೆದುಕೊಂಡು ಸಮರ್ಪಕ ವಿತರಣೆಗೆ ಕೈ ಜೋಡಿಸಬೇಕೆಂದು ಆಹಾರ ನಿರೀಕ್ಷಕ ರಾಮಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನ್ಯಾಯಬೆಲೆ ಅಂಗಡಿ ಪರವಾನಗಿದಾರರ ಸಭೆಯಲ್ಲಿ ಮಾತನಾಡಿದರು. ಮೇನಲ್ಲಿ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಮತ್ತು ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಮತ್ತು ಜೂನ್‌ನ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ, ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ವಿತರಣೆ ಮಾಡಬೇಕು. 
ಅಂತ್ಯೋದಯ ಅನ್ನ ಯೋಜನೆಯಲ್ಲಿ ಈ ಬಾರಿ ಪ್ರತಿ ಕಾರ್ಡ್‌ಗೆ ಮೇ ತಿಂಗಳಿಗೆ 35 ಕೆಜಿ, ಜೂನ್ ತಿಂಗಳ 35 ಕೆಜಿ ಒಟ್ಟು 70 ಕೆಜಿ ಅಕ್ಕಿ ಮೇನಲ್ಲಿ ವಿತರಣೆ ಮಾಡಬೇಕು. ಅನ್ನಭಾಗ್ಯ ಅಕ್ಕಿ ವಿತರಣೆ ಇಲ್ಲದ ಕಾರಣ ಯುನಿಟ್ ರೀತಿಯ ಹಂಚಿಕೆ ಈ ಬಾರಿ ಇರುವುದಿಲ್ಲ. ಅಲ್ಲದೆ ಎರಡು ತಿಂಗಳದು ಪ್ರತ್ಯೇಕವಾಗಿ ಬಯೋಮೆಟ್ರಿಕ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು. 
6464 ಅಂತ್ಯೋದಯ ಕಾರ್ಡ್‌ಗಳಿದ್ದು 23303 ಸದಸ್ಯರಿದ್ದಾರೆ. 63365 ಬಿಪಿಎಲ್ ಕಾರ್ಡ್‌ಗಳಿದ್ದು 235641 ಸದಸ್ಯರಿದ್ದಾರೆ. ಯಾವುದೇ ಗೊಂದಲವಿಲ್ಲದೆ ಎಲ್ಲರಿಗೂ ಪಡಿತರ ವಿತರಿಸುವ ಕೆಲಸ ಮಾಡಬೇಕು ಎಂದರು. ಆಹಾರ ಶಿರಸ್ತೇದಾರ್ ಮಹಾಲಕ್ಷ್ಮೀ ಪಾಟೀಲ್ ಇದ್ದರು.