ರಾಯಚೂರಿನ ರಂಗಮಂದಿರದಲ್ಲಿ ಬುಧವಾರ ಮಹಾನಗರ ಪಾಲಿಕೆಯಿಂದ ಭಾರತದ ಜನಗಣತಿ 2027ರ ಅಂಗವಾಗಿ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಮೊದಲನೇ ಹಂತದ ತರಬೇತಿ ಕಾರ್ಯಾಗಾರವನ್ನು ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಉದ್ಘಾಟಿಸಿದರು. ಪಾಲಿಕೆಯ ಉಪ ಆಯುಕ್ತ ಶರಣಪ್ಪ ಸತ್ಯಂಪೇಟ್, ಸದಸ್ಯ ಕಾರ್ಯದರ್ಶಿ ಕೃಷ್ಣ ಶಾವಂತಗೇರ, ವಲಯ ಆಯುಕ್ತ ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ, ಕಂದಾಯ ಅಧಿಕಾರಿಗಳಾದ ರವಿ.ಎಸ್.ಅಂಗಡಿ, ಶಂಶಾಲಂ ಇದ್ದರು. 
ರಾಯಚೂರು

ಜನಗಣತಿ ತರಬೇತಿ ಕಾರ್ಯಾಗಾರ- ಆಯಕ್ತ ಉದ್ಘಾಟನೆ

ರಾಚಯ್ಯ ಸ್ವಾಮಿ

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬುಧವಾರ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಭಾರತದ ಜನಗಣತಿ 2027ರ ಅಂಗವಾಗಿ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಮೊದಲನೇ ಹಂತದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಗಣತಿಗಳು ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಗುತ್ತದೆ. ಅದರಂತೆ 2011ರಲ್ಲಿ ಜನಗಣತಿಯಾಗಿತ್ತು. ನಂತರ 2021ರಲ್ಲಿ ಜನಗಣತಿಯಾಗಬೇಕಿತ್ತು. ಆದರೆ ಕೋವಿಡ್ ಸಂದರ್ಭವಿದ್ದರಿಂದ ಆಗಿರಲಿಲ್ಲ.
ಇದೀಗ 15 ವರ್ಷಗಳ ನಂತರ ಜನಗಣತಿ ಆರಂಭವಾಗುತ್ತಿದ್ದು, ಪ್ರತಿಯೊಬ್ಬ ಗಣತಿದಾರರ ಮತ್ತು ಮೇಲ್ವಿಚಾರಕರೂ ಶ್ರಮ ವಹಿಸಿ, ನಿಷ್ಠೆಯಿಂದ ಗಣತಿ ಕಾರ್ಯವನ್ನು ಮಾಡಬೇಕು ಎಂದರು. ಇಂದಿನಿಂದ 45 ದಿನಗಳ ವರೆಗೆ ಮನೆ ಮನೆಗಳಿಗೆ ಗಣತಿದಾರರು ಹೋಗಿ ಕಟ್ಟಡಗಳು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಕುಟುಂಬಗಳ ಬದುಕಿನ ಅಂಶಗಳ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಂತರ ಮಾಹಿತಿಗಳನ್ನು ಕ್ರೂಡಿಕರಿಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ. ಈ ವರದಿಯನ್ನು ಆದರಿಸಿ, ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ದೇಶವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ. ದೇಶದಲ್ಲಿ ಮೊದಲ ಬಾರಿಗೆ 1872ರಲ್ಲಿ ಜನಗಣತಿಯನ್ನು ಮಾಡಲಾಗಿತ್ತು. ಅದು ದಾಖಲೆಯ ಗಣತಿಯಾಗಿತ್ತು. ನಂತರ 1921ರಲ್ಲಿ ಮಾದರಿ ಗಣತಿಯಾಗಿದ್ದು, 2021ಕ್ಕೆ ಮಾದರಿ ಗಣತಿಯು 100 ವರ್ಷಗಳನ್ನು ಪೂರ್ಣಗೊಳಿಸಿದ್ದು, ಅದಾದ ನಂತರ ಇದೀಗ ಮತ್ತೆ ಜನಗಣತಿ ಆರಂಭವಾಗುತ್ತಿದೆ. ಈ ಬಾರಿಯ ಗಣತಿ ಡಿಜಿಟಲ್ ಆಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಉಪ ಆಯುಕ್ತ ಶರಣಪ್ಪ ಸತ್ಯಂಪೇಟ್, ಸದಸ್ಯ ಕಾರ್ಯದರ್ಶಿ ಕೃಷ್ಣ ಶಾವಂತಗೇರ, ವಲಯ ಆಯುಕ್ತ ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ, ಕಂದಾಯ ಅಧಿಕಾರಿಗಳಾದ ರವಿ.ಎಸ್.ಅಂಗಡಿ, ಶಂಶಾಲಂ ಸೇರಿದಂತೆ ಅನೇಕರು ಇದ್ದರು.