ಹೋಳಿ ಹಬ್ಬದ ಪ್ರಯುಕ್ತ ಮುದಗಲ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಶಾಂತಿ ಸಭೆ ನಡೆಯಿತು. ಪಿಎಸ್‌ಐ ವೆಂಕಟೇಶ ಮಾಡಗಿರಿ, ಬಿಜೆಪಿ ನಗರ ಘಟಕಾಧ್ಯಕ್ಷ ಕರಿಯಪ್ಪ ಯಾದವ್, ಸಣ್ಣಸಿದ್ದಯ್ಯ, ಬಸವರಾಜ ಬಂಕದಮನಿ ಇತರರಿದ್ದರು. 
ರಾಯಚೂರು

ಶಾಂತಿಯುತವಾಗಿ ಹೋಳಿ ಹಬ್ಬ ಆಚರಿಸಿ

ಮುದಗಲ್: ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಪಿಎಸ್‌ಐ ವೆಂಕಟೇಶ ಮಾಡಗಿರಿ ಹೇಳಿದರು. 
 ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ಯುವಕರು ಬಣ್ಣದೋಕುಳಿ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಿ ಸೌಹಾರ್ದದಿಂದ ಹಬ್ಬವನ್ನು ಆಚರಿಸಲು ಮನವಿ ಮಾಡಿದರು.
 ಪ್ರಮುಖರಾದ ಶರಣಪ್ಪ ಕಟ್ಟಿಮನಿ, ರಾಘವೇಂದ್ರ ಗುಮಾಸ್ತೆ ಇತರರು ಮಾತನಾಡಿದರು. ಮುಖಂಡರಾದ ಸಣ್ಣ ಸಿದ್ದಯ್ಯ ಮೇಗಳಪೇಟೆ, ಮಲ್ಲಿಕಾರ್ಜುನ ಮಾಟೂರು, ಕಾಂತಕುಮಾರ್ ಪತ್ತಾರ, ಮಲ್ಲಪ್ಪ ಹೂಗಾರ, ವೀರೇಶ ಉಪ್ಪಾರ, ನಾಗರಾಜ ತಳವಾರ, ಬಸವರಾಜ ಬಂಕದಮನಿ, ಹನುಮಂತ ಬಡಿಗೇರ್, ಮೆಹಬೂಬ್ ಸಾಬ್ ಡೋಂಗ್ರಿ, ರಮೇಶ್ ಇತರರಿದ್ದರು.