ಸಿಂಧನೂರಿನ ಅರಿಹಂತ್ ಮಿಲ್ ಹತ್ತಿರ ಸೇತುವೆ ಬಳಿ ಕಾರು ಪಲ್ಟಿಯಾಗಿರುವುದು.
ಸಿಂಧನೂರು: ನಗರದ ಮಸ್ಕಿ ರಸ್ತೆಯ ಅರಿಹಂತ್ ಮಿಲ್ ಹತ್ತಿರ ನಿರ್ಮಾಣ ಹಂತದ ಸೇತುವೆ ಬಳಿ ಬುಧವಾರ ಕಾರೊಂದು ಕಂದಕಕ್ಕೆ ಉರುಳಿ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಸ್ಕಿ ಮಾರ್ಗದಿಂದ ಸಿಂಧನೂರು ಕಡೆ ಬರುತ್ತಿದ್ದ ಕಾರು ಬೆಳಗಿನ ಜಾವ ಪಲ್ಟಿಯಾಗಿದ್ದು, ಚಾಲಕ ರಾಘವೇಂದ್ರ ತಲೆಗೆ ಪೆಟ್ಟಾಗಿದೆ. ನಂತರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.