ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿತು.  
ರಾಯಚೂರು

ಕಾಲುವೆ ಗೇಟ್‌ಗಳು ಗುಣಮಟ್ಟದ್ದಾಗಿರಲಿ

ಲಿಂಗಸುಗೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಲಾಯಿತು. 
ರೈತರು ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯ ಮಾಡಿರುವುದು ಸರಿಯಲ್ಲ. ರೈತ ಸಹಕಾರಿ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡಬೇಕು. ಎನ್‌ಆರ್‌ಬಿಸಿ ಬಲದಂಡೆ ಕಾಲುವೆ, ವಿತರಣಾ ಕಾಲುವೆಗಳಿಗೆ ಅಳವಡಿಸುತ್ತಿರುವ ಸ್ಕಾಡಾ ಗೇಟ್‌ಗಳು ಗುಣಮಟ್ಟದ್ದಾಗಿರಬೇಕು. ತರಕಾರಿ ಬೆಳೆದವರಿಗೆ ತೆರಿಗೆ ವಿಧಿಸಬಾರದು. 
ತಾಲೂಕಿನಲ್ಲಿ ಸಂಪರ್ಕ ರಸ್ತೆಗಳು ಹಾಳಾಗಿದ್ದು, ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕೆಪಿಎಸ್ ರದ್ದುಪಡಿಸಿ ಶಾಲೆಗಳಿಗೆ ಶೌಚಗೃಹ, ಕುಡಿವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕು. ಹಳ್ಳಿಗಳಲ್ಲಿ ತಲೆದೋರಿರುವ ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕು. 15 ದಿನಗಳೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆಂದು ಎಚ್ಚರಿಕೆ ನೀಡಿದರು. 
ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕು ಅಧ್ಯಕ್ಷ ವೈ.ದುರ್ಗಾಪ್ರಸಾದ, ಗೌರವಾಧ್ಯಕ್ಷ ನಾಗಪ್ಪ ಪುನೇದ, ರಾಮಣ್ಣ ಗುರುಗುಂಟಾ, ಬಸ್ಸಣ್ಣ ಕೋಠಾ, ಸೋಮರೆಡ್ಡಿ, ಮಹಾಂತೇಶ, ರಾಮನಗೌಡ ಕೋಠಾ, ರಮೇಶ ಗೌಡೂರು, ಹನುಮಗೌಡ ಭೂಪೂರು, ದುರುಗಪ್ಪ ಗೌಡೂರು, ಖಾದರಸಾಬ್, ಭೀಮಪ್ಪ ಬೆಂಚಲದೊಡ್ಡಿ, ಆದಪ್ಪ ಬೆಂಚಲದೊಡ್ಡಿ, ನರಸಪ್ಪ ಗುರುಗುಂಟಾ, ಆದಪ್ಪ ಜೋಗೇರ್, ಬಾಷಾಸಾಬ್, ಕಿರಣಕುಮಾರ, ಖಾದರಸಾಬ್, ಇಮಾಮ್ ಹುಸೇನ, ಸಾಬಯ್ಯ, ನಾನಿರೆಡ್ಡಿ ಇತರರಿದ್ದರು.