ಡಾ.ಯತೀಂದ್ರ 
ರಾಯಚೂರು

ಸಿಎಂ ಬದಲಾವಣೆ ಬಗ್ಗೆ ಮಾತನಾಡಲ್ಲ

ಕುರುವತ್ತಿ ಶ್ರೀಕಾಂತಪ್ಪ
ರಾಯಚೂರು: ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತು ನಾನು ಏನು ಹೇಳಬೇಕೋ ಅದೆಲ್ಲ ಹೇಳಿ ಮುಗಿಸಿದ್ದೇನೆ. ಇನ್ಮುಂದೆ ಈ ವಿಷಯವಾಗಿ ಏನೂ ಮಾತನಾಡುವುದಿಲ್ಲ ಎಂದು ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಬಾರಿ ಸಿಎಂ ಬದಲಾವಣೆ ಹಾಗೂ ಸಂಪುಟ ವಿಸ್ತರಣೆ ಬಗ್ಗೆಯೇ ಪ್ರಶ್ನೆಗಳಿರುತ್ತವೆ. ಕಳೆದ ನವೆಂಬರ್‌ನಿಂದ ಈ ಪ್ರಹಸನ ನಡೆಯುತ್ತಿದೆ. ಏನಾದರು ಆಗಿದೆಯೇ?. ಏನೇ ಆಗುವುದಿದ್ದರೂ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಏನೇ ಪ್ರಶ್ನೆಗಳಿದ್ದರೂ ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದರು.
ರಾಜ್ಯದಲ್ಲಿ ನಮ್ಮ ತಂದೆಯವರನ್ನು ಹೈಕಮಾಂಡ್ ಸಿಎಂ ಸ್ಥಾನದಿಂದ ಇಳಿಸಿದರೆ ದಲಿತ ಸಿಎಂ ಆಗುವ ಪ್ರಶ್ನೆ ಬರುತ್ತೆ. ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿದರೆ ಸ್ವಾಗತಿಸುತ್ತೇವೆ. ಸಚಿವ ಮಹದೇವಪ್ಪ ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್ ಬಗ್ಗೆ ನನಗೆ ಮಾಹಿತಿಯಿಲ್ಲ. ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ. ಇದಕ್ಕಾಗಿಯೇ ದೆಹಲಿಗೆ ಹೋಗುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.