ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಪರಶುರಾಮ್‌ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು. ಮುಖಂಡರಾದ ಹನುಮಂತಪ್ಪ ಕಾಕರಗಲ್, ಶಿವಪ್ಪ ಪಲಕನಮರಡಿ, ಶಿವರಾಜ ಕೋರಿ, ಹೈದರ್‌ಅಲಿ, ರಮೇಶ ಗೊಸ್ಲೆ ಇತರರಿದ್ದರು.
- ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯ
- ದೇವದುರ್ಗ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ
ದೇವದುರ್ಗ: ನಿವೇಶನರಹಿತ ಬಡವರು, ದಲಿತರು, ಕೂಲಿಕಾರರಿಗೆ ನಿವೇಶನಸಹಿತ ಮನೆ ನಿರ್ಮಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಟ್ಟಣದಲ್ಲಿ ಗ್ರೇಡ್-2 ತಹಸೀಲ್ದಾರ್ ಪರಶುರಾಮ್‌ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಬಡವರು, ದಲಿತರು, ಕೂಲಿಕಾರರು ನಿವೇಶನ, ಮನೆ, ಭೂಮಿಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ರೈತರು ಅರಣ್ಯಭೂಮಿ, ಗೈರಾಣ ಭೂಮಿ, ಗೋಮಾಳ ಸೇರಿ ವಿವಿಧೆಡೆ ಉಳುಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಅದಕ್ಕೂ ಅಧಿಕಾರಿಗಳು ಅಡ್ಡಿಪಡಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ನಿವೇಶನಕ್ಕಾಗಿ ಸಲ್ಲಿಸಿದ ಫಾರ್ಮ್ ನಂ. 57ಅನ್ನು ಸರ್ಕಾರ ವಿನಾಕಾರಣ ತಿರಸ್ಕರಿಸಿದೆ. ಆದ್ದರಿಂದ ಕೂಡಲೇ ಬಡವರಿಗೆ ಖಾಸಗಿ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಬೇಕು.
ಭೂರಹಿತ ಬಡವರು ಸಲ್ಲಿಸಿರುವ ಫಾರ್ಮ್ ನಂ. 57 ಅಂಗೀಕರಿಸಿ ಭೂಮಿ ಮಂಜೂರಾತಿ ನೀಡಬೇಕು. ಚಿಂಚೋಡಿಯಲ್ಲಿ ಲಭ್ಯವಿರುವ ಭೂಮಿಯಲ್ಲಿ ಬಡವರಿಗೆ ನಿವೇಶನ ನೀಡಿ, ಉಳಿದ ಭೂಮಿ ಹದ್ದುಬಸ್ತು ಮಾಡಬೇಕು. ಸರ್ಕಾರಿ ಜಮೀನಿನಲ್ಲಿ ವಾಸವಿರುವ ಜನರಿಗೆ ಇ-ಸ್ವತ್ತು ನೀಡಬೇಕು. ಹಳ್ಳಿಗಳಿಗೆ ಸೂಕ್ತ ರಸ್ತೆ ನಿರ್ಮಿಸಬೇಕು. ವೀರಗೋಟದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣ ಮಾಡಿ, ಸ್ಮಶಾನಕ್ಕಾಗಿ ಎರಡು ಎಕರೆ ಜಾಗ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಹನುಮಂತಪ್ಪ ಕಾಕರಗಲ್, ಶಿವಪ್ಪ ಪಲಕನಮರಡಿ, ಶಿವರಾಜ ಕೋರಿ, ಹೈದರ್ ಅಲಿ, ರಮೇಶ ಗೊಸ್ಲೆ, ಭೀಮಣ್ಣ ವೀರಗೋಟ, ಯೇಸು ಮಸರಕಲ್, ಬೂದೆಪ್ಪ ಮ್ಯಾತ್ರಿ, ನಾಗರಾಜ ಭೇರಿ, ರಂಗಪ್ಪ ನಾಯಕ, ತಿಮ್ಮಣ್ಣಗೌಡ, ಶಿವಪ್ಪ ಕಂಪೂರ್, ರಮೇಶ, ಶ್ರೀಮೌನ, ಚನ್ನಮ್ಮ, ಪಾರ್ವತಿ, ಸಲೀಂ, ಆಂಜನೇಯ, ರಮೇಶ ಇತರರಿದ್ದರು.