ಮಾನ್ವಿ ತಾಪಂ ಸಭಾಂಗಣದಲ್ಲಿ ಗೌತಮ ಬುದ್ಧ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಭೀಮರಾಯ ರಾಮದುರ್ಗ ಭಗವಾನ್ ಉದ್ಘಾಟಿಸಿದರು. ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಪಿಐ ಸೋಮಶೇಖರ ಕೆಂಚರಡ್ಡಿ ಇತರರಿದ್ದರು. 
ರಾಯಚೂರು

ಶಾಂತಿ-ಅಂಹಿಸೆಯ ಸಂದೇಶ ಸಾರಿದ ಬುದ್ಧ

ಮಾನ್ವಿ: ಜಗತ್ತಿಗೆ ಶಾಂತಿ, ಅಂಹಿಸೆಯ ತತ್ವ, ಸಂದೇಶಗಳನ್ನು ಸಾರಿದ ಮಹನೀಯ ಭಗವಾನ್ ಗೌತಮ ಬುದ್ಧನ ಆದರ್ಶಗಳನ್ನುಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಭೀಮರಾಯ ರಾಮದುರ್ಗ ಹೇಳಿದರು. 
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದುರ. ಬುದ್ಧ ಬೌದ್ಧ ಧರ್ಮ ಸ್ಥಾಪಿಸುವ ಮೂಲಕ ಜಗತ್ತಿಗೆ ಶಾಂತಿ, ಅಂಹಿಸೆಯ ಸಂದೇಶವನ್ನು ಸಾರಿದರು ಎಂದರು.
ಶಿಕ್ಷಕಿ ಅಶ್ವಿನಿ ಸಂಗಮೇಶ ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ತಾಪಂ ಸಭಾಂಗಣದವರೆಗೆ ಬುದ್ಧನ ಭಾವಚಿತ್ರ ಮೆರವಣಿಗೆ ನಡೆಯಿತು.
ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಪಿಐ ಸೋಮಶೇಖರ ಕೆಂಚರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಗುರುನಾಥ, ಮುಖಂಡರಾದ ಶಿವರಾಜ ನಾಯಕ ವಕೀಲ, ತಿಪ್ಪಣ್ಣ ಬಾಗಲವಾಡ, ಲಕ್ಷ್ಮಣ ಜಾನೇಕಲ್, ಹನುಮಂತ ಸೀಕಲ್, ಹನುಮಂತರಾಯ ಕಪಗಲ್, ಶಿವರಾಜ ಉಮಳಿಹೊಸೂರು, ದತ್ತಾತ್ರೇಯ ಕೊಟ್ನೆಕಲ್ ವಕೀಲರು, ನರಸಿಂಹ ಸೀಕಲ್, ರಾಮು ಹೊಳೆಯಪ್ಪನವರು, ಸಂಜೀವಪ್ಪ, ಯಮುನಪ್ಪ, ಹನುಮಂತ ಉದ್ಬಾಳ, ಈಶಪ್ಪ ಬೈಲ್‌ಮರ್ಚೆಡ್ ಇತರರಿದ್ದರು.