ಜನರ ಮೇಲೆ ಹರಿದ ಬುಲೆರೋ ವಾಹನ. k shreekantha
ರಾಯಚೂರು

ಪಾದಚಾರಿಗಳ ಮೇಲೆ ಹರಿದ ಬುಲೆರೋ, ಇಬ್ಬರು ಸ್ಥಳದಲ್ಲೇ ಮೃತ

ದೇವದುರ್ಗ ತಾಲೂಕಿನ ಜಾಲಹಳ್ಳಿಯ ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳ ಮೇಲೆ ಬುಲೆರೋ ವಾಹನ ಹರಿದು ಬುಧವಾರ ರಾತ್ರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಹನುಮಯ್ಯ ಗೋಪಳಾಪುರ (45), ನಿಂಗಯ್ಯ ದೊಡ್ಡಮನಿ ಹೊಸೂರುಸಿದ್ದಾಪುರ ಮೃತ ಪಾದಚಾರಿಗಳು.

ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳ ಮೇಲೆ ಬುಲೆರೋ ವಾಹನ ಹರಿದು ಬುಧವಾರ ರಾತ್ರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

ಹನುಮಯ್ಯ ಗೋಪಳಾಪುರ (45), ನಿಂಗಯ್ಯ ದೊಡ್ಡಮನಿ ಹೊಸೂರುಸಿದ್ದಾಪುರ ಮೃತ ಪಾದಚಾರಿಗಳು. ರಾಮಲಿಂಗಪ್ಪ ನಾಯಕ, ರಂಗಪ್ಪ ನಾಯಕ ಹಾಗೂ ಮುದ್ದಣ್ಣ ನಾಯಕ ಗಂಭೀರ ಗಾಯಗೊಂಡಿದ್ದು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟ್ಟಣದ ಜೆಜೆ ಭವನ ಸಮೀಪ ಐವರು ನಡೆದುಕೊಂಡು ಬರುತ್ತಿದ್ದರು. ಈವೇಳೆ ವೇಗವಾಗಿ ಬಂದ ಬುಲೆರೋ ಪಾದಚಾರಿಗಳ ಮೇಲೆ ಹರಿದಿದೆ. ಚಾಲಕ ವಾಹನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲದಿನಗಳ ಹಿಂದೆ ಇದೇ ಸ್ಥಳದಲ್ಲಿ ಸಾರಿಗೆ ಸಂಸ್ಥೆ ಬಸ್ ಬೈಕ್‌ಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದರು.