ರಾಜ್ಯ ಸರ್ಕಾರ ಜಾರಿ ಮಾಡಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ಹಿಂಪಡೆಯಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ನಗರ ಶಾಸಕ ಡಾ.ಶಿವರಾಜ ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ರಾಘವೇಂದ್ರ ಉಟ್ಕೂರು , ಸಂತೋಷ್ ರಾಜಗುರು, ಕಡಗೋಲ ಆಂಜಿನೇಯ್ಯ, ರಾಜಕುಮಾರ, ಕಡಗೋಲ ರಾಮಚಂದ್ರ, ವಿಜಯಕುಮಾರ, ರವಿಂದ್ರ ಜಾಲ್ದಾರ್, ಬಂಡೇಶ್ , ಈ.ಶಶಿರಾಜ್, ಬಂಗಿ ನರಸರೆಡ್ಡಿ, ವಿ.ನಾಗರಾಜ್, ಶಂಕ್ರಪ್ಪ, ಭೀಮಣ್ಣ ಮಂಚಲ್, ವಿನಾಯಕ್ ಇದ್ದರು.
ರಾಯಚೂರು ರಾಜ್ಯ ಸರ್ಕಾರ ಜಾರಿ ಮಾಡಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ಹಿಂಪಡೆಯಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ಅನುಷ್ಠಾನ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ವಿರೋಧ ಪಕ್ಷದವರನ್ನು ಮತ್ತು ವಿರೋಧ ಮಾಡುವವರನ್ನು ಬಂಧಿಸಿ ಅವರ ಧ್ವನಿಯನ್ನು ಅಡಿಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದ್ವೇಷ ಭಾಷಣ ವಿದೇಯಕಕ್ಕೆ ಅಂಕಿತ ಹಾಕದಂತೆ ಈಗಾಗಲೇ ರಾಜ್ಯಪಾಲರಿಗೆ ಮನವಿ ಮಾಡಲಾಗಿದ್ದು.
ಒಂದು ವೇಳೆ ರಾಜ್ಯಪಾಲರು ಅಂಕಿತ ಹಾಕಿದರೆ ಸರ್ವಾಧಿಕಾರ ದೋರಣೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಯ್ದೆಯು ಸಂವಿಧಾನದಲ್ಲಿ ಅಂಬೇಡ್ಕರ್ ಅವರು ನೀಡಿದ ಮಾತನಾಡುವ ಹಕ್ಕಿನ ವಿರುದ್ಧವಾಗಿದೆ. ಏಕೆಂದರೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ಒಂದು ಕೃತ್ಯ ಮಾಡಿದಾಗ ಅದನ್ನು ಖಂಡನೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಆದರೆ ಅಂತಹ ಜವಾಬ್ದಾರಿಯುತವಾದ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ರಾಘವೇಂದ್ರ ಉಟ್ಕೂರು , ಸಂತೋಷ್ ರಾಜಗುರು, ಕಡಗೋಲ ಆಂಜಿನೇಯ್ಯ, ರಾಜಕುಮಾರ, ಕಡಗೋಲ ರಾಮಚಂದ್ರ, ವಿಜಯಕುಮಾರ, ರವಿಂದ್ರ ಜಾಲ್ದಾರ್, ಬಂಡೇಶ್ , ಈ.ಶಶಿರಾಜ್, ಬಂಗಿ ನರಸರೆಡ್ಡಿ, ವಿ.ನಾಗರಾಜ್, ಶಂಕ್ರಪ್ಪ, ಭೀಮಣ್ಣ ಮಂಚಲ್, ವಿನಾಯಕ್ , ಶಿವಕುಮಾರ್ ಪಾಟೀಲ್, ವಿ.ಪಿ.ರೆಡ್ಡಿ ಸೇರಿ ಅನೇಕರು ಇದ್ದರು.