ಸಿಂಧನೂರು ತಾಲೂಕಿನ ತುರ್ವಿಹಾಳ ಪಪಂ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಯಪ್ಪ ಬೆಳ್ಳಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಬಿಜೆಪಿ ಮಂಡಲ ಮಸ್ಕಿ ಘಟಕ ಅಧ್ಯಕ್ಷ ಶರಣಯ್ಯಸ್ವಾಮಿ ಸೊಪ್ಪಿನಮಠ ಇತರರಿದ್ದರು. 
ರಾಯಚೂರು

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಉಪಚುನಾವಣೆ
  • ಬಿಜೆಪಿ ಅಭ್ಯರ್ಥಿ
  • ಗೆಲುವು

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು

ಸಿಂಧನೂರು: ತಾಲೂಕಿನ ತುರ್ವಿಹಾಳ ಪಪಂ 4ನೇ ವಾರ್ಡ್ ಸದಸ್ಯ ನಿಧನ ಹಿನ್ನೆಲೆಯಲ್ಲಿ ಭಾನುವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಯಪ್ಪ ಬೆಳ್ಳಿ 376 ಮತಗಳಿಂದ ವಿಜೇತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಪ್ರತಿಷ್ಠೆಯಾಗಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಲಾಜಿ ಮಡಿವಾಳ 354 ಮತಗಳಿಂದ ಸೋತಿದ್ದಾರೆ.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಬಿಜೆಪಿ ಮಂಡಲ ಮಸ್ಕಿ ಘಟಕ ಅಧ್ಯಕ್ಷ ಶರಣಯ್ಯಸ್ವಾಮಿ ಸೊಪ್ಪಿನಮಠ, ಪ್ರಮುಖರಾದ ಬಸವರಾಜ ಹಸಮಕಲ್, ಸಿದ್ದೇಶ ಗುರಿಕಾರ, ವೆಂಕಣ್ಣ ಸಾಹುಕಾರ, ಕರಕಪ್ಪ ಸಾಹುಕಾರ, ಚಂದ್ರು ಪವಾಡಶೆಟ್ಟಿ, ನಿರುಪಾದಿ ಉಪ್ಪಲದೊಡ್ಡಿ, ಶಿವಮಣಿ, ಮರಿಸ್ವಾಮಿ, ಯಲ್ಲಪ್ಪ ಪೂಜಾರಿ, ನಾಗರಾಜ ಇತರರಿದ್ದರು.