ಪ್ರಮುಖ ಮುಖ್ಯಾಂಶಗಳು
ರಾಯಚೂರು: ಭೂಮಾನಂದ ಕೊಲೆ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಆ.23ರಂದು ಹದ್ದಿನಾಳ ಗ್ರಾಮದಿಂದ ನಗರದವರೆಗೆ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಭೂಮಾನಂದ ಕೊಲೆ ವಿರೋಧಿ ಹೋರಾಟ ಸಮಿತಿ ಪ್ರಮುಖ ಎಸ್.ಮಾರೆಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ 12ವರ್ಷಗಳ ದ್ವೇಷದ ಹಿನ್ನೆಲೆ ಭೂಮಾನಂದ ಕೊಲೆ ನಡೆದಿದ್ದು, ಜಿಲ್ಲೆಯಲ್ಲಿ ಎಸ್ಟಿ ಸಮುದಾಯದ ನಾಲ್ಕು ಜನ ಶಾಸಕರು, ಸಂಸದರಿದ್ದು, ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆ ಘಟನೆಗಳು ನಡೆದರೂ ರಕ್ಷಣೆಯ ಮಾತನಾಡುತ್ತಿಲ್ಲ.
ದೇವದುರ್ಗ ಶಾಸಕಿ ಕರಿಯಮ್ಮ ನಾಯಕ, ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ತಡೆ ಅಧ್ಯಕ್ಷರಾದ ಜಿಲ್ಲಾಧಿಕಾರಿ ಹದ್ದಿನಾಳ ಗ್ರಾಮಕ್ಕೆ ಭೇಟಿ ನೀಡಿ, ಕೊಲೆಯಾದ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡಿಲ್ಲ.