ದೇವದುರ್ಗದ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಬುದ್ದಿನ್ನಿ, ಕಾರ್ಯದರ್ಶಿ ವೆಂಕಟೇಶ್ ಪೂಜಾರಿ, ಮೌನೇಶ್ ಬೂದೂರ್, ನಾಗಪ್ಪ ಉಪ್ಪಾರ, ಕೆ.ರಂಗಪ್ಪ ಇತರರಿದ್ದರು.
ದೇವದುರ್ಗ: ದೈವಭಕ್ತರಾಗಿದ್ದ ಶ್ರೀ ಭಗೀರಥ ಮಹರ್ಷಿ ಅಮೋಘ ತಪಸ್ಸಿನಿಂದ ಗಂಗೆಯನ್ನೇ ಭೂಮಿಗೆ ತರಿಸಿದ್ದರು ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಭೂಲೋಕದಲ್ಲಿ ನೀರಿನ ಬವಣೆ ನೀಗಿಸಲು ಪರಮಾತ್ಮನಿಂದ ವರ ಪಡೆದು ಗಂಗೆಯನ್ನು ಭೂಲೋಕಕ್ಕೆ ತಂದ ಕೀರ್ತಿ ಮಹರ್ಷಿ ಭಗೀರಥರಿಗೆ ಸಲ್ಲುತ್ತದೆ. ಭಗೀರಥರು ಪ್ರಾಮಾಣಿಕತೆ, ನಿಷ್ಠೆ, ಆಧ್ಯಾತ್ಮಿಕ ಬದುಕು ಸವೆಸಿದವರು. ಜನರು ಸನ್ಮಾರ್ಗದಲ್ಲಿ ಮುನ್ನಡೆಯಲು ಭಗೀರಥರ ಆಚಾರ ವಿಚಾರಗಳು ದಾರಿದೀಪವಾಗಿವೆ. ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುನ್ನೆಲೆಗೆ ಬರಬೇಕು.
ಭಗೀರಥ ಸಮಾಜ ಕಾಯಕ ಸಮುದಾಯವಾಗಿದ್ದು ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎನ್ನುವಂತೆ ಉಪ್ಪನ್ನು ಉತ್ಪಾದಿಸಿ ಇಡೀ ಜಗತ್ತಿಗೆ ನೀಡಿದ ಕೀರ್ತಿ ಸಲ್ಲುತ್ತದೆ ಎಂದರು.
ಭಗೀರಥ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಬುದ್ದಿನ್ನಿ, ಕಾರ್ಯದರ್ಶಿ ವೆಂಕಟೇಶ್ ಪೂಜಾರಿ, ಮೌನೇಶ್ ಬೂದೂರ್, ನಾಗಪ್ಪ ಉಪ್ಪಾರ, ಕೆ.ರಂಗಪ್ಪ, ವೆಂಕೋಬ ಪೂಜಾರಿ, ಶಿವಪುತ್ರ ಉಪ್ಪಾರ್, ರಂಗಯ್ಯ, ರಂಗಪ್ಪ, ಮುದುಕಪ್ಪ, ತಿಮ್ಮರೆಡ್ಡಿ ಪೂಜಾರಿ, ಶಿವಪುತ್ರ ಉಪ್ಪಾರ, ಕಚೇರಿ ಸಿಬ್ಬಂದಿ ಪ್ರವೀಣ್ ಕುಮಾರ್, ಅಭಿಷೇಕ್, ಶ್ರೀಶೈಲ, ಮಹಾದೇವಪ್ಪ, ದೀಪ, ಲಕ್ಷ್ಮೀ, ಪಾರ್ವತಿ, ಕವಿತಾ, ವಿಜಯಲಕ್ಷ್ಮೀ, ಗಂಗಮ್ಮ, ನಿರ್ಮಲಾ, ಪದ್ಮಾವತಿ ಇತರರಿದ್ದರು.