ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಕಿಪ್ರಾ ಶಾಲೆಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಯಿತು. ಮುಖ್ಯಶಿಕ್ಷಕ ಶಂಕರ ದೇವರ ಹಿರೇಮಠ, ಶಿಕ್ಷಕ ಪ್ರದೀಪ್‌ಕುಮಾರ, ಅಂಗನವಾಡಿ ಶಿಕ್ಷಕಿ ಭಾಗ್ಯಶ್ರೀ, ಮುಖ್ಯ ಅಡುಗೆ ತಯಾರಕಿ ರೇಣುಕಾ ಹಾಗೂ ವೆಂಕಟೇಶ ಇದ್ದರು.  
ರಾಯಚೂರು

ಪಠ್ಯೇತರ ಚಟುವಟಿಕೆಗಳಲ್ಲಿ ಇರಲಿ ಆಸಕ್ತಿ

ನರೇಶ್ ಕುಮಾರ್
ಸಿಂಧನೂರು: ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ ಹೇಳಿದರು.
ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಶನಿವಾರ ನಿಮಿತ್ತ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ತಿಂಗಳು ಮೂರನೇ ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. 
ಅಂದು ಬೇರೆ ಬೇರೆ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಮಾಡಿಸುವ ಮೂಲಕ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡುವಂತೆ ವಿಷಯ ವಸ್ತುಗಳನ್ನು ಸಂಭ್ರಮ ಶನಿವಾರದಲ್ಲಿ ಅಳವಡಿಸಲಾಗಿದೆ. ಈ ವಾರ ವಿದ್ಯಾರ್ಥಿಗಳಿಗೆ ಚಿತ್ರಗಳನ್ನು ನೋಡಿ ಕಥೆ ಕಟ್ಟೋಣ ಶಾಲೆಯ ಸುತ್ತ ಹೋಗಿ ಅರಿವು ಮೂಡಿಸೋಣ ಚಟುವಟಿಕೆ ಮಾಡಿಸಲಾಯಿತು ಎಂದರು. 
ಶಿಕ್ಷಕ ಪ್ರದೀಪ್‌ಕುಮಾರ ಮಾತನಾಡಿ, ಮಾದಕ ವಸ್ತುಗಳ ದುರುಪಯೋಗ ತಡೆಯಲು ವೈಯಕ್ತಿಕ ಜಾಗೃತಿ, ಶಿಕ್ಷಣ ಮತ್ತು ಪರಿಣಾಮಕಾರಿ ನಿರ್ವಹಣೆಯ ಅಗತ್ಯವಿದೆ. ಆರೋಗ್ಯಕರ ಜೀವನ ಶೈಲಿ, ಒತ್ತಡ ನಿರ್ವಹಣೆ ಮತ್ತು ಸೂಕ್ತ ಕೌನ್ಸೆಲಿಂಗ್ ಹಾಗೂ ವೈದ್ಯಕೀಯ ಚಿಕಿತ್ಸೆಯಿಂದ ಇದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. 
ಕಿರು ನಾಟಕ ಪ್ರದರ್ಶನ ಹಾಗೂ ಜಾಗೃತಿ ಜಾಥಾ ನಡೆಯಿತು. ಅಂಗನವಾಡಿ ಶಿಕ್ಷಕಿ ಭಾಗ್ಯಶ್ರೀ, ಮುಖ್ಯ ಅಡುಗೆ ತಯಾರಕಿ ರೇಣುಕಾ ಹಾಗೂ ವೆಂಕಟೇಶ ಇದ್ದರು.