ಮಾನ್ವಿಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ ಉದ್ಘಾಟಿಸಿದರು. ಬಸವಕೇಂದ್ರದ ಗೌರವಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಅಧ್ಯಕ್ಷ ಶರಣಬಸವ ಪಾಟೀಲ್ ಬೆಟ್ಟದೂರು, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಪಾಟೀಲ್, ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ಇತರರಿದ್ದರು.
- ಮುಕ್ಕಣ್ಣ ಕರಿಗಾರ ಅಭಿಮತ
- ಮಾನ್ವಿ ಬಸವ ಜಯಂತಿ ಕಾರ್ಯಕ್ರಮ
ಮಾನ್ವಿ: ನಾಡಿನಲ್ಲಿ ಬಸವಣ್ಣ ಹುಟ್ಟದಿದ್ದರೆ ವೀರಶೈವ ಮತ್ತು ಲಿಂಗಾಯತರು ತಲೆಗೂದಲು ತೆಗೆದು ಹೀನಾಯಸ್ಥಿತಿಗೆ ಹೋಗುತ್ತಿದ್ದರು. ಬಸವಣ್ಣನವರಿಂದ ಇಂದು ವೀರಶೈವ ಲಿಂಗಾಯತರಿಗೆ ಸಮಾಜದಲ್ಲಿ ಘನತೆ ಹೆಚ್ಚಿದೆ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ ಹೇಳಿದರು.
ಪಟ್ಟಣದ ಕಾಕತೀಯ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ಬಸವ ಕೇಂದ್ರ, ಮಹಿಳಾ ಬಸವಕೇಂದ್ರದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಲವರು ಬಸವಣ್ಣವರನ್ನು ಭಕ್ತ ವರ್ಗದವರು, ನಾವು ಗುರು ವರ್ಗದವರು ಎನ್ನುತ್ತಾರೆ. ಅವರು ಮೂಲತಃ ಬ್ರಾಹ್ಮಣ ಸಮಾಜದವರು. ಅವರು ಹೇಗೆ ಭಕ್ತರಾಗುತ್ತಾರೆ ? ನಾಲ್ಕು ವರ್ಣಾಶ್ರಮದಲ್ಲಿ ಸೇರಿದವರು ಭಕ್ತರಾಗುತ್ತಾರೆ. ಮನುಕುಲದ ಒಳಿತು ಬಯಸಿದ ಬಸವಣ್ಣ ‘ನಿಮ್ಮೊಳಗಿರುವ ದೇವರನ್ನು ನೀವೇ ಕಂಡುಕೊಳ್ಳಿ’ ಎನ್ನುವ ಸಂದೇಶ ನೀಡಿದರು. ಗ್ರಾಮೀಣ ಭಾಗದ ಜನರು ಬಸವಣ್ಣನವರನ್ನು ದ್ವಿತೀಯ ಶಂಭು ಎಂದು ಕರೆದು ಅವರಲ್ಲಿ ಶಿವನನ್ನು ಕಂಡಿದ್ದಾರೆ ಎಂದರು.
ಉಪನ್ಯಾಸಕಿ ರೇಖಾ ಪಾಟೀಲ್ ಉಪನ್ಯಾಸ ನೀಡಿದರು. ಅಮರೇಶ ಗವಾಯಿ ಕರೆಗುಡ್ಡ ವಚನ ಗಾಯನ ಮಾಡಿದರು. ಬಸವಕೇಂದ್ರದ ಗೌರವಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರತಿನಿಧಿ ಸಿದ್ದಲಿಂಗಪ್ಪ ಚಿಕ್ಕಕೊಟ್ನೆಕಲ್, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣಚಂದಾ, ಕಾಕತೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಸತ್ಯನಾರಾಯಣ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ಪಾಟೀಲ್ ಬೆಟ್ಟದೂರು, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಪಾಟೀಲ್, ನಗರ ಘಟಕದ ಅಧ್ಯಕ್ಷ ರವಿಕುಮಾರ ಸಾಹುಕಾರ, ಕುಮಾರಸ್ವಾಮಿ ಮೇದಾ ಇತರರಿದ್ದರು.