ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುದಗಲ್‌ನಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.  
ರಾಯಚೂರು

ಡಿವೈಎಸ್ಪಿ ನೇತೃತ್ವದಲ್ಲಿ ಬಂದೋಬಸ್ತ್

ಮುದಗಲ್: ಈದ್ ಮಿಲಾದ್ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಮೆರವಣಿಗೆಯಲ್ಲಿ ಧಾರ್ಮಿಕ ಘೋಷಣೆಗಳನ್ನು ಹಾಕಲಾಯಿತು. ಈ ಮೂಲಕ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದದ ಸಂದೇಶ ಸಾರಲಾಯಿತು. ವಿವಿಧ ಸಮುದಾಯಗಳ ಜನರು ಶುಭಾಶಯ ವಿನಿಮಯ ಮಾಡಿಕೊಂಡರು.

ಮೌಲಾನಾ ಜಮೀರ್ ಅಹ್ಮದ್ ಖಾಜಿ ಸಾಬ್, ಸೈಯದ್ ಯಾಸಿನ್ ಖಾದ್ರಿ, ನ್ಯಾಮತ್ ಖಾದ್ರಿ, ಅಮೀರ್ ಬೇಗ್ ಉಸ್ತಾದ್, ಎಸ್.ಎನ್.ಖಾದ್ರಿ, ಅಜ್ಮೀರ್ ಬೆಳ್ಳಿಕಟ್ ಇತರರಿದ್ದರು.

ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.