(shrinivasa-reddy 
ರಾಯಚೂರು

ಶಾಸಕ ಪ್ರದೀಪ್ ಈಶ್ವರರ ಮೇಲಿನ ಹಲ್ಲೆ ಖಂಡನೀಯ

ರಾಚಯ್ಯ ಸ್ವಾಮಿ
ರಾಯಚೂರು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದ್ದ ನಾಡಪ್ರಭು ಕೆಂಪೆಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಲಿಜ ಸಮಾಜದ ಶಾಸಕ ಪ್ರದೀಪ್ ಈಶ್ವರ ಮೇಲೆ ಚಪ್ಪಲಿ ತೂರಿ ಅಪಮಾನ ಮಾಡಿದ ಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಮುನ್ನೂರು ಕಾಪು ಸಮಾಜದ ಪ್ರಮುಖ ಎನ್.ಶ್ರೀನಿವಾಸ ರೆಡ್ಡಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಲಿಜ ಸಮಾಜದ ಏಕೈಕ ಶಾಸಕ ಪ್ರದೀಪ್ ಈಶ್ವರ ಇದ್ದು, ಇವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೂಕ್ತ ನಿರ್ದೇಶ ನೀಡಿ ಆರೋ ಪಿಗಳನ್ನು ಬಂಧಿಸಬೇಕು. ಇಲ್ಲದೇ ಹೋದಲ್ಲಿ ರಾಜ್ಯದಾಧ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಶಾಸಕರನ್ನು ಅಪಮಾನಿಸಿ ಜಯಂತಿಗೆ ಅಡ್ಡಿ ಉಂಟು ಮಾಡಿರುವ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ವಿ.ಲಕ್ಷ್ಮೀರೆಡ್ಡಿ, ಬಂಗಿ ನರಸರೆಡ್ಡಿ, ಉಟ್ಕೂರು ಕೃಷ್ಣಮೂರ್ತಿ, ಚಂದ್ರಶೇಖರ ಪೋಗಲ್, ಪ್ರತಾಪರೆಡ್ಡಿ, ಜಿ.ಶೇಖರರೆಡ್ಡಿ, ಯು.ಗೋವಿಂದರೆಡ್ಡಿ ಇದ್ದರು.