ರಾಯಚೂರು ಒಂಬತ್ತು ಮತ್ತು ಹತ್ತನೇ ತರಗತಿಗಳ ಪಾಠ ಬೋಧನೆಗಾಗಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜಿಸಲು ಹೊರಡಿಸಿರುವ ಸರ್ಕಾರದ ಕರಡು ನಿಯಮಗಳನ್ನು ಹಿಂಪಡೇಯಲು ಒತ್ತಾಯಿಸಿ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗುತ್ತದೆಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ನರಸಪ್ಪ ಭಂಡಾರಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಓದುತ್ತಿರುವ ಲಕ್ಷಾಂತರ ಬಡ, ಗ್ರಾಮೀಣ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಆಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ನೀಟ್ , ಜೆಇಇ , ಸಿಇಟಿ ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಸಂಪೂರ್ಣವಾಗಿ ಪಿಯು ಉಪನ್ಯಾಸಕರನ್ನೇ ನೆಚ್ಚಿಕೊಂಡಿದ್ದಾರೆ. ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವುದರಿಂದ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಂಠಿತಗೊಂಡಿದ್ದು,
ಗ್ರಾಮೀಣ ಪ್ರತಿಭೆಗಳಿಗೆ ಸಿಗಬೇಕಾದ ಸೂಕ್ತ ಮಾರ್ಗದರ್ಶನ ತಪ್ಪಿ ಹೋಗುತ್ತದೆ ಮತ್ತು ಅವರ ಭವಿಷ್ಯ ಪ್ರಪಾತಕ್ಕೆ ತಳ್ಳಿದಂತಾಗುತ್ತದೆ. ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದರೆ ಸರ್ಕಾರ ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕೇ ಹೊರತು, ಪಿಯು ಉಪನ್ಯಾಸಕರ ಸ್ವತಂತ್ರ ಅಸ್ತಿತ್ವವನ್ನು ಹಾಳು ಮಾಡಬಾರದು ಎಂದರು.
ಒಂದು ವೇಳೆ ಸರ್ಕಾರ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾದಲ್ಲಿ ಪ್ರಗತಿಪರ ವಲಯದಲ್ಲಿ ಚರ್ಚಿಸಿ ಅದಕ್ಕೆ ತಜ್ಞರ ವರದಿಯನ್ನು ಆದರಿಸಿ ನಿರ್ಧಾರ ತೆಗೆದುಕೊಳ್ಳುವ ಅಲ್ಲದೇ ವಿದ್ಯಾರ್ಥಿಗಳ ಪರವಾಗಿ ಕಾಳಜಿ ಹೊಂದಿದ್ದರೆ ಕೂಡಲೇ ಪ್ರೌಡಶಾಲೆಯ ಶಿಕ್ಷರನ್ನು ನೇಮಕ ಮಾಡಿಕೊಳ್ಳಲಿ ಹೊರತು ಈ ರೀತಿಯ ಅವೈಜ್ಞಾನಿಕ ನೀತಿಯನ್ನು ಹೊರಡಿಸುವುದು ಸರಿಯಲ್ಲ ಎಂದರು.
ಜಿಲ್ಲೆಯಲ್ಲಿ ಒಟ್ಟು 205 ಪಿಯು ಕಾಲೇಜುಗಳು ಇದ್ದು, 52 ಸರ್ಕಾರಿ ಕಾಲೇಜುಗಳು , 7 ಅನುದಾನಿತ , 146 ಖಾಸಗಿ ಕಾಲೇಜುಗಳಿಗೆ ಇದರಲ್ಲಿ 52 ಸರ್ಕಾರಿ ಕಾಲೇಜುಗಳಲ್ಲಿ 43 ಪ್ರಾಚಾರ್ಯರ ಹುದ್ದೆಗಳಿವೆ. ವಿವಿಧ ವಿಷಯಗಳ 90 ಕ್ಕೂ ಅಧಿಕ ಉಪನ್ಯಾಸಕರು ಕೊರತೆ ಇದೆ ಅಲ್ಲದೇ ಜಿಲ್ಲೆಗೆ 280 ಅತಿಥಿ ಉಪನ್ಯಾಸಕರ ಬೇಡಿಕೆ ಇದೆ.
ಆದರೆ 173 ಅತಿಥಿ ಉಪನ್ಯಾಸಕರನ್ನು ಸರ್ಕಾರ ನೀಡಿದೆ ಇಷ್ಟೆಲ್ಲ ತೊಂದರೆಗಳ ನಡುವೆ ಉತ್ತಮ ಫಲಿತಾಂಶ ನೀಡುವ ಸವಾಲು ನಮ್ಮ ಮುಂದೆ ಇದೆ ಇದೀಗ ಸರ್ಕಾರ ಇಂತಹ ಅವೈಜ್ಞಾನಿಕ ನೀತಿ ತರಲು ಹೊರಟಿರುವ ಮಾತ್ರ ಅವೈಜ್ಞಾನಿಕ ಅಲ್ಲದೇ ಪ್ರಾಚಾರ್ಯರ ಬಡ್ತಿ ವಿಚಾರದಲ್ಲೂ ಸರ್ಕಾರ ವಿಳಂಬ ನೀತಿಯನ್ನು ಮಾಡುತ್ತಿರುವ ಕೂಡ ಸಂಘದಿಂದ ಖಂಡಿಸಲಾಗುತ್ತದೆ. ಕೂಡಲೇ ಈ ನಿರ್ಧಾರವನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಿಕ್ಕಿ ಜಾನ್ಸನ್ , ರವಿಕುಮಾರ್ , ಶರಣಪ್ಪ ಪಾಟೀಲ್ , ಮಂಜುನಾಥ ಐಲಿ , ಗೋವರ್ಧನ ರೆಡ್ಡಿ , ಜಲೀಲ್ ಅಹ್ಮದ್ ಇದ್ದರು.