ಹದ್ದಿನಾಳ ಗ್ರಾಮದ ಯುವಕ ಭೂಮಾನಂದ ಹತ್ಯೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘಷರ್ ಸಮಿತಿಗಳ ಒಕ್ಕೂಟದಿಂದ ಸಿರವಾರ ತಹಸೀಲ್ದಾರ್ ಅಶೋಕ ಪವಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ರಾಜಪ್ಪ ಹೊನ್ನಟಗಿ, ಬಡ್ಡ ಹನುಮಂತಪ್ಪ, ಬಸವರಾಜ ಭಂಡಾರಿ, ಅಬ್ರಹಾಂ ಹೊನ್ನಟಗಿ, ಮಲ್ಲಪ್ಪ ದೊಡ್ಮನೆ, ಎಂ.ಮನೋಹರ, ವಿಜಯರಾಣಿ, ಮತ್ತಾಯಪ್ಪ, ಅರಳಪ್ಪ ಯದ್ದಲದಿನ್ನಿ, ಬಿ.ರಾಮಯ್ಯ, ಜಯಪ್ಪ ಗುತ್ತೆದಾರ್ ಇತರರಿದ್ದರು. 
ರಾಯಚೂರು

ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮವಹಿಸಿ

ಪ್ರಮುಖ ಮುಖ್ಯಾಂಶಗಳು

  • ಡಿಎಸ್‌ಎಸ್
  • ಒಕ್ಕೂಟದ
  • ಬೃಹತ್
ಸಿರವಾರ: ಹದ್ದಿನಾಳ ಗ್ರಾಮದ ಯುವಕ ಭೂಮಾನಂದ ಹತ್ಯೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅಶೋಕ ಪವಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಭೂಮಾನಂದ ಹದ್ದಿನಾಳ ಅವರು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿಯಾಗಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಹತ್ಯೆಯ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಕೃತ್ಯದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ 50ಲಕ್ಷ ರೂ.ಪರಿಹಾರ, 10ಎಕರೆ ಜಮೀನು ಹಾಗೂ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ದಲಿತ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದರು.
ಪ್ರಮುಖರಾದ ದಾನಪ್ಪ, ಜಯಪ್ಪ ಕೆಂಪು, ಎಲ್.ವಿ.ಸುರೇಶ ಇತರರಿದ್ದರು. ಬಸವ ವೃತ್ತದಿಂದ ಬಸ್ ನಿಲ್ದಾಣವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.