ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಮೀನಗಡದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿಗಳಾದ ಮಂಜುನಾಥ, ಚನ್ನಬಸವ, ಶಾಹಿದ್, ಹನುಮಂತ, ವಿರಾಜ, ಶರಣಬಸವ, ಮಂಜುಳಾ, ದೇವಮ್ಮ ಇತರರಿದ್ದರು. ಬಸ್ ತಡೆದಿದ್ದರಿಂದ ತಾಯಿಯೊಬ್ಬರು ಮಗುವನ್ನು ಚಿಕಿತ್ಸೆಗಾಗಿ ಕರೆದೊಯ್ಯಲು ಪರದಾಡಿದರು. 
ರಾಯಚೂರು

ಸಕಾಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಕೆಆರ್‌ಎಸ್ ಪಕ್ಷದ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ
  • ಕವಿತಾಳ ಅಮೀನಗಡ 15ಕ್ಕೂ ಹೆಚ್ಚು ಬಸ್‌ಗಳ ತಡೆ
ಕವಿತಾಳ: ಸಮಯಕ್ಕೆ ಸರಿಯಾಗಿ ಬಸ್ ಬಾರದಿರುವುದರಿಂದ ಸಮೀಪದ ಅಮೀನಗಡದಲ್ಲಿ ಕೆಆರ್‌ಎಸ್ ಪಕ್ಷದ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಬಸ್‌ಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್ ಪಕ್ಷದ ಮಸ್ಕಿ ತಾಲೂಕು ಅಧ್ಯಕ್ಷ ಬಸವರಾಜ ಮಾತನಾಡಿ, ಅಮೀನಗಡ, ಯತಗಲ್, ವಟಗಲ್, ಯಕ್ಲಾಸಪುರ, ನೆಲಕೋಳ, ಕಾಚಪೂರ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಲಿಂಗಸುಗೂರಿಗೆ ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ. ಆದರೆ, 10 ಗಂಟೆಯಾದರೂ ಬಸ್ ಬಾರದಿರುವುದು ವಿದ್ಯಾರ್ಥಿಗಳು ತರಗತಿಗೆ ಸಕಾಲಕ್ಕೆ ತೆರಳದೆ ಪಠ್ಯಕ್ರಮದಲ್ಲಿ ಹಿಂದುಳಿಯುವಂತಾಗಿದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಬಸ್ ಬಿಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಎರಡು ಗಂಡೆಗೂ ಹೆಚ್ಚು ಸಮಯ ಬಸ್‌ಗಳು ನಿಲುಗಡೆಯಾಗಿದ್ದರಿಂದ ಪ್ರಯಾಣಿಕರು ರೋಸಿ ಹೋದರು. ಬಳಿಕ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ಕವಿತಾಳ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಆದಪ್ಪ ಮೇಲಾಧಿಕಾರಿಗಳ ಆದೇಶದಂತೆ ನಾಳೆಯಿಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಬಿಡಲಾಗುವುದು ಎಂದು ಭರವಸೆ ನೀಡಿದಾಗ ಪ್ರತಿಭಟನೆ ಕೈಬಿಡಲಾಯಿತು. ವಿದ್ಯಾರ್ಥಿಗಳಾದ ಮಂಜುನಾಥ, ಚನ್ನಬಸವ, ಶಾಹಿದ್, ಹನುಮಂತ, ವಿರಾಜ, ಶರಣಬಸವ, ಮಂಜುಳಾ, ದೇವಮ್ಮ ಇತರರಿದ್ದರು.
ನಿತ್ಯ ತರಗತಿಗೆ ಗೈರು: ರಾಯಚೂರಿನಿಂದ ಲಿಂಗಸಗೂರು, ಮುದಗಲ್, ಹುನಗುಂದ, ಇಲಕಲ್, ಬೆಳಗಾವಿ, ಕೊಲ್ಲಾಪುರ ಸೇರಿದಂತೆ ವಿವಿಧ ಡಿಪೋದ ಬಸ್‌ಗಳನ್ನು ತಡೆಯಲಾಗಿತ್ತು. ಲಿಂಗಸುಗೂರಿಗೆ ಮಗುವಿನ ಚಿಕಿತ್ಸೆಗಾಗಿ ತೆರಳುತ್ತಿದ್ದ ಸುಬಾನಾ ಎನ್ನುವ ಮಹಿಳೆ ಬಸ್‌ಗಾಗಿ ಪರದಾಡಿದರು. ಇನ್ನೂ ಸರ್ಕಾರಿ, ಖಾಸಗಿ ನೌಕರರು, ಕಾರ್ಯಕ್ರಮಗಳಿಗೆ ತೆರಳುತ್ತಿರುವವರು ವಿದ್ಯಾರ್ಥಿಗಳಿಗೆ ತಾಕೀತು ಮಾಡಿದರೆ, ನಮಗೆ ನಿತ್ಯ ತರಗತಿಗಳು ತಪ್ಪುತ್ತಿವೆ ಎಂದು ಅಳಲು ತೋಡಿಕೊಂಡರು.