ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್‌ಗೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.ಸೇನೆಯ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಪ್ರಮುಖರಾದ ಮಹ್ಮದ್ ಅಜ್ಮೀರ್, ರವಿಕುಮಾರ ಬರಗುಡಿ, ಮೋಸಿನ್‌ಖಾನ್, ಜಮೀರ್‌ಖಾನ್, ಅಲ್ಲಾವುದ್ದೀನ್ ಬಾಬಾ ಇತರರಿದ್ದರು.
- ಕರವೇ ಸ್ವಾಭಿಮಾನಿ ಸೇನೆ ಒತ್ತಾಯ
- ಲಿಂಗಸುಗೂರು ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್‌ಗೆ ಮನವಿ
ಲಿಂಗಸುಗೂರು: ತಾಲೂಕು ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು, ಹಾಗೂ ಚರ್ಮ ರೋಗ ತಜ್ಞರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್‌ಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ನೂರಾರು ಜನರು ಚಿಕಿತ್ಸೆಗೆಂದು ಬರುತ್ತಾರೆ. ಕಿವಿ ನೋವು, ಮೂಗಿನ ತೊಂದರೆ, ಗಂಟಲು ನೋವು ಸಮಸ್ಯೆಯಿಂದ ಬಳಲುವವರಿಗೆ ಹಾಗೂ ಚರ್ಮ ರೋಗಕ್ಕೆ ತುತ್ತಾದವರಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರೇ ಇಲ್ಲ. ಈ ಕಾಯಿಲೆಗಳಿಗೆ ತುತ್ತಾದವರು ದೂರದ ನಗರಗಳಿಗೆ ಹೋಗಬೇಕಾಗುತ್ತದೆ. ಆದ್ದರಿಂದ ಕೂಡಲೇ ಇಎನ್‌ಟಿ ಹಾಗೂ ಚರ್ಮರೋಗ ತಜ್ಞ ವೈದ್ಯರನ್ನು ನೇಮಿಸಬೇಕು. ಅಲ್ಲದೆ, ನಿಗದಿತ ಅವಧಿಯಲ್ಲಿ ವೈದ್ಯರು ಕರ್ತವ್ಯದಲ್ಲಿ ಹಾಜರಿರಲು ಸೂಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಸೇನೆಯ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಪ್ರಮುಖರಾದ ಮಹ್ಮದ್ ಅಜ್ಮೀರ್, ರವಿಕುಮಾರ ಬರಗುಡಿ, ಮೋಸಿನ್‌ಖಾನ್, ಜಮೀರ್‌ಖಾನ್, ಅಲ್ಲಾವುದ್ದೀನ್ ಬಾಬಾ, ಮರಿಯಪ್ಪ ಹಿರೇನಗನೂರು, ಅಜೀಜ್‌ಪಾಷಾ, ಬಸನಗೌಡ, ಮಲ್ಲನಗೌಡ, ಇಲಿಯಾಸ್, ಶಬ್ಬೀರ ಫೂಲ್‌ವಾಲೆ, ರೆಹಮಾನ್, ತಿಮ್ಮನಗೌಡ, ನನ್ನೆಸಾಬ್, ಜಿ.ಭಗೀರಥ, ವೀರೇಶ ಐದನಾಳ ಇತರರಿದ್ದರು.