ಸಿಂಧನೂರಿನಲ್ಲಿ ಸೋಮವಾರ ಸಿಪಿಐನಿಂದ ಸಾಮ್ರಾಜ್ಯಶಾಹಿ ವಿರೋಧಿ ದಿನವಾಗಿ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ಪ್ರಮುಖರಾದ ಬಾಷುಮಿಯಾ, ಚಂದ್ರಶೇಖರ ಕ್ಯಾತ್ನಟ್ಟಿ, ವೆಂಕನಗೌಡ ಗದ್ರಟಗಿ, ಜಗದೀಶ, ಚಿಟ್ಟಿಬಾಬು ಇದ್ದರು.
ಸಿಂಧನೂರು: ನಗರದ ಎಪಿಎಂಸಿ ಮುಂಭಾಗದಲ್ಲಿ ಸೋಮವಾರ ಭಗತ್‌ಸಿಂಗ್ ಹುತಾತ್ಮ ದಿನವನ್ನು ಸಿಪಿಐ ಮುಖಂಡರು ಸಾಮ್ರಾಜ್ಯಶಾಹಿ ವಿರೋಧಿ ದಿನವಾಗಿ ಆಚರಿಸಿ ಪ್ರತಿಭಟನಾ ರ‌್ಯಾಲಿ ನಡೆಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಮಾತನಾಡಿ, ಸಾಮ್ರಾಜ್ಯಶಾಹಿಗಳಿಗೆ ಲಾಭವೇ ಪ್ರಧಾನವಾಗಿದೆ. ಯಾವುದೇ ಕಾರಣಕ್ಕೂ ಅವರಿಗೆ ಭಾರತದಲ್ಲಿ ಇರಲು ಅವಕಾಶ ಕೊಡಬಾರದೆಂದು ಭಗತ್ ಸಿಂಗ್ ಧ್ಯೇಯವಾಗಿತ್ತು. ಈಗಲೂ ಸಾಮ್ರಾಜ್ಯಶಾಹಿ ಅಮೆರಿಕ ಲಾಭಕ್ಕಾಗಿ ಅನೇಕರನ್ನು ಬಲಿ ಪಡಿಯುತ್ತಿದೆ ಎಂದರು.
ಪ್ರಮುಖ ಚಂದ್ರಶೇಖರ ಕ್ಯಾತ್ನಟ್ಟಿ ಮಾತನಾಡಿದರು. ಹಮಾಲರ ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಕಟ್ಟಡ ನಿರ್ಮಾಣ ಸಂಘದ ಅಧ್ಯಕ್ಷ ಜಗದೀಶ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಮರಿಯಪ್ಪ, ಹಮಾಲರ ಸಂಘದ ಮುಖಂಡರಾದ ಹನುಮಂತಪ್ಪ ಹಂಚಿನಾಳ, ಪ್ರಕಾಶ, ಅಮರೇಶ ನಾಯಕ, ಮುಕ್ತುಮ್‌ಸಾಬ್, ಸುಭಾನ್‌ಸಾಬ್ ಇದ್ದರು.