ಸಿಂಧನೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಸಿಲ್ ಕಚೇರಿಯ ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಯಂಕಪ್ಪ ಕೆಂಗಲ್, ಕೆಂಗಲ್ ಗ್ರಾಮ ಘಟಕ ಅಧ್ಯಕ್ಷ ಹನುಮೇಶ, ಕೂಲಿಕಾರರಾದ ಮುದಿಯಪ್ಪ, ಅಮಾಜಪ್ಪ, ಪ್ರಹ್ಲಾದ, ಮಹಿಬೂಬ, ಚನ್ನಪ್ಪ ಇದ್ದರು. 
ರಾಯಚೂರು

ಕೆಂಗಲ್ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ

ಪ್ರಮುಖ ಮುಖ್ಯಾಂಶಗಳು

  • ಕೆಂಗಲ್ ಗ್ರಾಮ

ಕೆಂಗಲ್ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ

ಸಿಂಧನೂರು: ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಬುಧವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಿಸಿ ವಿಬಿಜಿ ರಾಮಜೀ ಹೆಸರಿನ ಮೇಲೆ ಕ್ರಾಂತಿಕಾರಕ ಬದಲಾವಣೆ ತರುವುದಾಗಿ ಹೇಳಿತ್ತು. ಈಗ ಅದರಿಂದ ಗ್ರಾಮೀಣ ಪ್ರದೇಶದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಎರಡ್ಮೂರು ಹಂತದ ಕೆಲಸಗಳಿಗೆ ವೇತನ ನೀಡದೆ ಬಾಕಿ ಉಳಿಸಿಕೊಳ್ಳಲಾಗಿದೆ.
ಕೆಂಗಲ್ ಗ್ರಾಮದಲ್ಲಿಯೂ ಈ ಸಮಸ್ಯೆ ಇದ್ದು, ಕೂಡಲೇ 3 ಬಾರಿ ಹಂತ ಹಂತವಾಗಿ ಕೆಲಸ ಮಾಡಿದರೂ ಇವರೆಗಿನ ವೇತನ ಮಂಜೂರು ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಕುಡಿವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು.
15 ಜನ ಮೇಟಿಗಳಿಗೆ ಕಾರ್ಡ್‌ಗಳನ್ನು ಕೂಡಲೇ ವಿತರಿಸಬೇಕು. ಮಹಿಳೆಯರಿಗೆ 5 ರೂ. ಹಾಗೂ ಪುರುಷರಿಗೆ 4 ರೂ. ಪ್ರೋತ್ಸಾಹಧ ನೀಡಬೇಕು. ಸಲಕರಣೆಗಳ ರಿಪೇರಿಗೆ ಹಣ ಬಿಡುಗಡೆ ಮಾಡಬೇಕು. ತಿಂಗಳವರೆಗೆ ಕೆಲಸ ನಿರಂತರ ನೀಡಬೇಕು.
ರೈತರಿಗೆ ಬೆಳೆನಷ್ಟ ಪರಿಹಾರ ಕೊಡಬೇಕು. ಕೆಂಗಲ್ ಗ್ರಾಮದಲ್ಲಿ 2 ಅಂಗನವಾಡಿ ಕೇಂದ್ರಗಳಿಗೆ 1 ಕಟ್ಟಡವಿದ್ದು ಇನ್ನೊಂದು ಕೇಂದ್ರಕ್ಕೆ ಕಟ್ಟಡ ಮಂಜೂರು ಮಾಡುವುದು ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಿಐಟಿಯು ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಯಂಕಪ್ಪ ಕೆಂಗಲ್, ಕೆಂಗಲ್ ಗ್ರಾಮ ಘಟಕ ಅಧ್ಯಕ್ಷ ಹನುಮೇಶ, ಪ್ರಮುಖರಾದ ಮುದಿಯಪ್ಪ, ಅಮಾಜಪ್ಪ, ಪ್ರಹ್ಲಾದ, ಮಹಿಬೂಬ್, ಚನ್ನಪ್ಪ, ಕರಲಿಂಗ, ಅಂಬಣ್ಣ, ಯಂಕಪ್ಪ, ಬಸವ, ರಂಗಣ್ಣ, ಹುಲಿಗೆಮ್ಮ, ಪಾರ್ವತಮ್ಮ, ವಿರುಪಮ್ಮ, ಈರಮ್ಮ, ಯಲ್ಲಮ್ಮ, ಗಂಗಮ್ಮ, ನಿಂಗಮ್ಮ, ಶೇಖಮ್ಮ, ಅಂಬಮ್ಮ ಇತತರಿದ್ದರು.