ಲಿಂಗಸುಗೂರು ಕೃಷಿ ಕಚೇರಿ ಆವರಣದಲ್ಲಿ ಧರಣಿ ನಿರತರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರ ಗೌಡ ಪಾಟೀಲ್ ಮಾತನಾಡಿದರು. ಪ್ರಮುಖರಾದ ಬಸವರಾಜ ಗೋಸ್ಲೆ, ಹನುಮಂತರಾಯ ನೇಲ್ಗಿ, ಪ್ರಸಾದ ರೆಡ್ಡಿ, ಸೋಮನಗೌಡ, ಕುಬೇರ ಕುಪ್ಪಿಗುಡ್ಡ, ಹನುಮಂತ ಜೂಲಗುಡ್ಡ, ಮಹ್ಮದ ಖಾಜಾ ಇತರರಿದ್ದರು.
ಲಿಂಗಸುಗೂರು: ಪಟ್ಟಣದ ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡಿದ ಆದೇಶ ರದ್ದುಪಡಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪಾಟೀಲ್ ಹೇಳಿದರು.
ಇಲ್ಲಿನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಎರಡನೇ ದಿನದ ಧರಣಿಯಲ್ಲಿ ಮಾತನಾಡಿದರು. ಕೃಷಿ ಇಲಾಖೆ ಅಧಿಕಾರಿಗಳು ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ. ಇದೇ ರೀತಿ ನಿರ್ಲಕ್ಷೃ ತೋರಿದರೆ ಕೃಷಿ ಕಚೇರಿಗೆ ಬೀಗ ಹಾಕುವುದು, ಆಮರಣಾಂತ ನಿರಶನ ನಡೆಸಲಾಗುವುದು. ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ರೈತರಿಗೆ ಉಪಯೋಗವಾಗಿರುವ ಕಚೇರಿ ಸ್ಥಳಾಂತರಗೊಂಡರೆ ತೊಂದರೆಯಾಗುತ್ತದೆ. ಕಂದಾಯ ಇಲಾಖೆ ಉಪ ವಿಭಾಗ ಕಚೇರಿ ಇರುವ ತಾಲೂಕಿನಲ್ಲಿ ಕೃಷಿ ಉಪ ನಿರ್ದೇಶಕರ ಕಚೇರಿ ಇರಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಸಿಂಧನೂರಿಗೆ ಸ್ಥಳಾಂತರ ಮಾಡುವುದು ಸರಿಯಾದ ಕ್ರಮವಲ್ಲ. ಕೂಡಲೇ ಅಧಿಕಾರಿಗಳು ನಮ್ಮ ಹೋರಾಟಕ್ಕೆ ಸ್ಪಂದಿಸಿ ಸ್ಥಳಾಂತರ ಮಾಡಿದ ಆದೇಶ ರದ್ದುಪಡಿಸುತ್ತಾರೆಂಬ ನಂಬಿಕೆ ಇದೆ ಎಂದರು.
ರೈತ ಮುಖಂಡರಾದ ಕೆಂಚಪ್ಪ ಅಂಕನಾಳ, ಶಿವಪ್ಪ ಅಂಕನಾಳ, ಯಮನೂರಪ್ಪ ಭೋಗಾಪುರ, ಮಹಾಂತೇಶ ಬಿಜ್ಜಲ್ ಗುರುಗುಂಟಾ, ನಾಗರಾಜ ಹಲ್ಕಾವಟಗಿ, ಸೋಮರೆಡ್ಡಿ ಪಿಕಳಿಹಾಳ, ಕುಬೇರ ಕುಪ್ಪಿಗುಡ್ಡ, ಹನುಮಂತ ಜೂಲಗುಡ್ಡ, ಮಹ್ಮದ ಖಾಜಾ ಗುರುಗುಂಟಾ, ನಾಗಪ್ಪ ಪುನೇದ, ರಂಗಪ್ಪ, ಮುದೆಪ್ಪ, ಹನಮನಗೌಡb ದೇವರಭೂಪುರ ಇದ್ದರು.