ಸಿರವಾರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡಲಾಯಿತು.  
ರಾಯಚೂರು

ಬೆಳವಣಿಗೆ ಮೇಲೆ ದುಷ್ಪರಿಣಾಮ

ಅಶೋಕ್ ಕುಮಾರ್ ಎನ್

ಸಿರವಾರ: ಜಂತುಹುಳುಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ ಹೇಳಿದರು.

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಿಸಿ ಮಾತನಾಡಿದರು. ಜಂತುಹುಳುಗಳಿಂದ ರಕ್ತಹೀನತೆ, ಅಪೌಷ್ಟಿಕತೆ, ಹೊಟ್ಟೆ ನೋವು, ಕಲಿಕೆಯಲ್ಲಿ ಸಾಮರ್ಥ್ಯ ಕುಂಠಿತವಾಗುವುದು ಮುಂತಾದ ಸಮಸ್ಯೆಗಳಾಗಬಹುದು. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳಿಗೆ ತಪ್ಪದೆ ಮಾತ್ರ ಸೇವನೆ ಮಾಡಿಸಬೇಕೆಂದರು.

ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಚಂದ್ರಕಲಾ, ಪ್ರಾಚಾರ್ಯ ದೇವೇಂದ್ರಪ್ಪ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಲ್ಲಪ್ಪ, ಆಶಾ ಕಾರ್ಯಕರ್ತೆ ಜರೀನಾ, ಶಿಕ್ಷಕರಿದ್ದರು.