ಸಿರವಾರ ಪಟ್ಟಣದ 4 ಮತ್ತು 5ನೇ ವಾರ್ಡ್‌ಗೆ ಕುಡಿಯುವ ನೀರು ಸರ್ಪಕವಾಗಿ ಪೂರೈಸಲು ಒತ್ತಾಯಿಸಿ ವಾರ್ಡ್ ನಿವಾಸಿಗಳು ಖಾಲಿ ಕೊಡ ಹಿಡಿದು ಪಪಂ ಮುಂದೆ ಪ್ರತಿಭಟನೆ ನಡೆಸಿದರು. ಮೂಕಮ್ಮ, ದೇವಮ್ಮ, ಹನುಮವ್ವ, ಮಾದೇವಮ್ಮ, ಯಲ್ಲಮ್ಮ, ಶಿವಮ್ಮ, ಬಸ್ಸಮ್ಮ, ಪುಟ್ಟಮ್ಮ, ಮೈಲಾರಿ, ಮುತ್ತಣ್ಣ ನಾಯಕ, ನಾಗರಾಜ ಹಾಗೂ ಹೋರಾಟಗಾರರಾದ ನಾಗರಾಜ ಬೋಮನಾಳ, ಮೇಶಕ್ ಇದ್ದರು. 
ರಾಯಚೂರು

ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಖಾಲಿ ಕೊಡ ಹಿಡಿದು ಮಹಿಳೆಯರ ಒತ್ತಾಯ
  • ಸಿರವಾರ 4 ಮತ್ತು 5ನೇ ವಾರ್ಡ್ ನಿವಾಸಿಗಳು ಪ್ರತಿಭಟನೆ
ಸಿರವಾರ: ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಒತ್ತಾಯಿಸಿ ಪಟ್ಟಣದ 4 ಮತ್ತು 5ನೇ ವಾರ್ಡ್ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆಯಾದರೂ ಸಮರ್ಪಕವಾಗಿ ಬರುತ್ತಿಲ್ಲ. ಕಳೆದ 6 ತಿಂಗಳಿಂದ ನೀರಿನ ಅಭಾವ ಹೆಚ್ಚಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಪಪಂ ಮುಖ್ಯಾಧಿಕಾರಿ ಜಸ್ಪಾಲ್ ಸಿಂಗ್ ಪ್ರತಿಕ್ರಿಯಿಸಿ, ಎರಡ್ಮೂರು ದಿನಗಳಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದದರು. ವಾರ್ಡ್ ನಿವಾಸಿಗಳಾದ ಮೂಕಮ್ಮ, ದೇವಮ್ಮ, ಹನುಮವ್ವ, ಮಾದೇವಮ್ಮ, ಯಲ್ಲಮ್ಮ, ಶಿವಮ್ಮ, ಬಸ್ಸಮ್ಮ, ಪುಟ್ಟಮ್ಮ, ಮೈಲಾರಿ, ಮುತ್ತಣ್ಣ ನಾಯಕ, ನಾಗರಾಜ ಹಾಗೂ ಹೋರಾಟಗಾರರಾದ ನಾಗರಾಜ ಬೊಮ್ಮನಾಳ, ಮೇಶಕ್, ಹನುಮಂತ ಕುಂಬಾರ ಇತರರಿದ್ದರು.