ದೇವದುರ್ಗದಲ್ಲಿ ಕಟ್ಟಡ ಛಾವಣಿ ಕುಸಿದು ಯುವಕರು ಮೃತಪಟ್ಟ ಸ್ಥಳಕ್ಕೆ ಸಂಸದ ಜಿ.ಕುಮಾರ ನಾಯಕ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಪುರಸಭೆ ಮುಖ್ಯಾಽಕಾರಿ ಕೆ.ಹಂಪಯ್ಯ, ಪಿಐ ಎಸ್.ಮಂಜುನಾಥ ಇತರರಿದ್ದರು. 
ರಾಯಚೂರು

ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ

ಪ್ರಮುಖ ಮುಖ್ಯಾಂಶಗಳು

  • ಸಂಸದ ಜಿ.ಕುಮಾರ ನಾಯಕ ಭರವಸೆ
  • ದೇವದುರ್ಗ ಕಟ್ಟಡ ಕುಸಿದ ಸ್ಥಳಕ್ಕೆ ಭೇಟಿ
ದೇವದುರ್ಗ: ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಕಟ್ಟಡದ ಛಾವಣಿ ಕುಸಿದುಬಿದ್ದು ಮೃತಪಟ್ಟ ಮೂವರು ವಿದ್ಯಾರ್ಥಿಗಳ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ಘಟನೆ ನಡೆದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಕಟ್ಟಡ ಮಾಲೀಕರ ವಿರುದ್ಧ ಕೇಸ್ ದಾಖಲಾಗಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು. ಸ್ಥಳ ಸೂಕ್ತ ಪರಿಶೀಲನೆ ನಡೆಸಿ ಮುಂಜಾಗ್ರತೆವಹಿಸಬೇಕು ಎಂದು ಅಽಕಾರಿಗಳಿಗೆ ಸೂಚಿಸಿದರು.
ಮೃತ ಮೂವರು ವಿದ್ಯಾರ್ಥಿಗಳ ಕುಟುಂಬ ಬಡತನದಿಂದ ಕೂಡಿದ್ದು ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಕುಟುಂಬದ ಜತೆ ಸರ್ಕಾರ ನಿಲ್ಲಲಿದೆ. ಪುರಸಭೆ ಹಾಗೂ ಸ್ಥಳೀಯ ಅಽಕಾರಿಗಳು ಪಟ್ಟಣದಲ್ಲಿ ಸರ್ವೇ ನಡೆಸಿ ಹಳೇ ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಬೇಕು. ಹಳೇ ಕಟ್ಟಡ, ಶಿಥಿಲಾವಸ್ಥೆಗೆ ಬಂದ ಬಿಲ್ಡಿಂಗ್ ಮಾಲೀಕರಿಗೆ ನೋಟಿಸ್ ನೀಡಿ ತೆರವಿಗೆ ಕ್ರಮಕೈಗೊಳ್ಳಬೇಕು. ರಿಪೇರಿ ಮಾಡಲು ಸೂಚಿಸುವ ಜತೆಗೆ ಎಲ್ಲ ಬಿಲ್ಡಿಂಗ್‌ಗಳಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳಲು ಮಾಲೀಕರಿಗೆ ನೋಟಿಸ್ ನೀಡಬೇಕು ಎಂದು ಅಽಕಾರಿಗಳಿಗೆ ತಾಕೀತು ಮಾಡಿದರು.
ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಪುರಸಭೆ ಮುಖ್ಯಾಽಕಾರಿ ಕೆ.ಹಂಪಯ್ಯ, ಪಿಐ ಎಸ್.ಮಂಜುನಾಥ ಇತರರಿದ್ದರು.