ರಾಯಚೂರು ಅಂಚೆ ಇಲಾಖೆ ಅಧೀಕ್ಷಕ ಎಚ್.ಆರ್.ಶಿವಾನಂದಗೆ ಹಿರೇಲೆಕ್ಕಿಹಾಳದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಪ್ರಮುಖರಾದ ಅಮರೇಗೌಡ ಪಾಟೀಲ್, ಗದ್ದೆಪ್ಪ, ಮಾನಪ್ಪ ಪೂಜಾರಿ, ದೊಡ್ಡಪ್ಪ ಬಂಗಿ, ಮಲ್ಲಪ್ಪ ಬಡಿಗೇರ, ಶರಣಪ್ಪ ಮಾಕಾಪುರ, ಹನುಮಂತ ಡಣಕನಕಲ್, ಹುಸೇನಸಾಬ್ ಕಡಿವಾಲ, ಆದಪ್ಪ ಇತರರಿದ್ದರು. 
ರಾಯಚೂರು

ಮುದಗಲ್ ಅಂಚೆ ಕಚೇರಿ ವಿಭಾಗಕ್ಕೆ ಸೇರಿಸಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಹಿರೇಲೆಕ್ಕಿಹಾಳ
  • ಗ್ರಾಮಸ್ಥರಿಂದ
  • ಮನವಿ
ಮುದಗಲ್: ಸಮೀಪದ ಹಿರೇಲೆಕ್ಕಿಹಾಳ ಉಪ ಅಂಚೆಕಚೇರಿ ರೋಡಲಬಂಡಾದ (ಯುಕೆಪಿ) ಉಪಅಂಚೆ ಕಚೇರಿ ವಿಭಾಗಕ್ಕೆ ಸೇರಿದ್ದು, ಅದನ್ನು ಮುದಗಲ್ ಅಂಚೆ ಕಚೇರಿ ವ್ಯಾಪ್ತಿಗೆ ಸೇರಿಸಬೇಕು ಎಂದು ಹಿರೇಲೆಕ್ಕಿಹಾಳ ಭೇಟಿ ನೀಡಿದ ರಾಯಚೂರು ಜಿಲ್ಲಾ ಅಂಚೆ ಇಲಾಖೆ ಅಧೀಕ್ಷಕ ಎಚ್.ಆರ್.ಶಿವಾನಂದಗೆ ಬುಧವಾರ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಹಿರೇಲೆಕ್ಕಿಹಾಳ ಗ್ರಾಮದ ಅಂಚೆ ಕಚೇರಿ ಕಳೆದ 3ದಶಕಗಳಿಂದ ರೋಡಲಬಂಡಾ (ಯುಕೆಪಿ) ಅಂಚೆ ಕಚೇರಿ ವ್ಯಾಪ್ತಿಗೆ ಬರುತ್ತಿದೆ. ಅಂಚೆ ಕಚೇರಿಯಿಂದ ಪತ್ರಗಳು 2-3 ದಿನಗಳ ನಂತರ ಗ್ರಾಹಕರಿಗೆ ತಲುಪುತ್ತಿವೆ.
ಈ ಹಿನ್ನೆಲೆಯಲ್ಲಿ ಸಮೀಪದ ಮುದಗಲ್ ಅಂಚೆ ಕಚೇರಿ ವಿಭಾಗಕ್ಕೆ ಬದಲಾವಣೆ ಮಾಡಿದರೆ ಸಾರ್ವಜನಿಕರಿಗೆ ಅನೂಕೂವಾಗುತ್ತಿದೆ ಎಂದರು.