ಲಿಂಗಸುಗೂರು ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್. ಹೂಲಗೇರಿ ಮಾತನಾಡಿದರು. ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ, ಜಿಲ್ಲಾ ಉಪಾಧ್ಯಕ್ಷ ಶಿವಣ್ಣ ನಾಯಕ ಕೋಠಾ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ ಇತರರಿದ್ದರು.
ಲಿಂಗಸುಗೂರು: ಕ್ಷೇತ್ರದಲ್ಲಿರುವುದು ಒಂದೇ ಕಾಂಗ್ರೆಸ್. ಹಲವರು ವೈಯಕ್ತಿಕ ಕಾಂಗ್ರೆಸ್ ಹುಟ್ಟು ಹಾಕಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಬಿಎಲ್‌ಎ-2 ಸದಸ್ಯರು ಹಾಗೂ ಸರ್ಕಾರದಿಂದ ನೇಮಕವಾಗಿರುವ ನಾಮ ನಿರ್ದೇಶನ ಸದಸ್ಯರು, ವಿವಿಧ ವಿಭಾಗ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಬಿಟ್ಟು ಹೋಗಿದ್ದರೆ ಅಂಥವರ ಹೆಸರು ಸೇರಿಸಲು ಅವಕಾಶ ನೀಡಿದಾಗ ಸೇರ್ಪಡೆಗೊಳಿಸುವ ಕೆಲಸ ಮಾಡಬೇಕು. ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ನಡೆದಿದ್ದು, ಬೂತ್ ಮಟ್ಟದ ಸದಸ್ಯರು ಭಾಗವಹಿಸಿ ಪರಿಶೀಲನೆ ಮಾಡಬೇಕು. ಅಕ್ರಮ ಮತದಾರರು ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ತಾಲೂಕಿನಲ್ಲಿ 130 ಜನರನ್ನು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲಾಗಿದೆ. ಜವಾಬ್ದಾರಿಯುತವಾಗಿ ಸಾರ್ವಜನಿಕರ ಕೆಲಸ ಮಾಡಬೇಕು. ಮುಂಬರುವ ಪುರಸಭೆ, ಗ್ರಾಪಂ, ತಾಪಂ ಚುನಾವಣೆಗಳಿಗೆ ಸಿದ್ಧರಾಗಬೇಕು ಎಂದರು.
ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಪ್ರಚಾರ ಸಮಿತಿ ಅಧ್ಯಕ್ಷ ಮಹ್ಮದ ರಫಿ, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ಪದವೀಧರ ವಿಭಾಗ ಅಧ್ಯಕ್ಷ ಸಂಜೀವಪ್ಪ ಚಲುವಾದಿ, ತಮ್ಮಣ್ಣ ಗುತ್ತೇದಾರ, ಸಂತೋಷ ಸೊಪ್ಪಿಮಠ, ಖಾಜಾ ಹುಸೇನ ಪೂಲಭಾವಿ, ಉಮೇಶ ಹುನಕುಂಟಿ, ಮೌನೇಶ ಪೂಜಾರಿ, ಅಬ್ದುಲ್ ಖದೀರ್, ವಿಜಯಲಕ್ಷ್ಮೀ ದೇಸಾಯಿ ಇತರರಿದ್ದರು.