ರಾಯಚೂರಿನ ಪೊಲೀಸ್ ಪರೇಡ್‌ಮೈದಾನದಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಪತ್ರಕರ್ತರ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಟ್ರೋಫಿ ವಿತರಣೆ ಮಾಡಿದರು. ಎಎಸ್ಪಿಗಳಾದ ಹರೀಶ, ಕುಮಾರಸ್ವಾಮಿ, ಡಿಪಿಎಸ್‌ಗಳಾದ ಶಾಂತವೀರ, ಪರಮಾನಂದ ಗೋಡ್ಕೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಿಪೋಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್, ಹಿರಿಯ ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಮಲ್ಲಿಕಾರ್ಜುನಯ್ಯ, ಸುರೇಶ ರೆಡ್ಡಿ, ಗೌಡಪ್ಪ ಗೌಡ, ಮಹಾನಂದ ನಾಯಕ, ಜಗನ್ನಾಥ ಪೂಜಾರ ಇದ್ದರು.
ರಾಯಚೂರು
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸರು ಮತ್ತು ಪತ್ರಕರ್ತರ ನಡುವೆ ಭಾನುವಾರ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಪತ್ರಕರ್ತರ ತಂಡ ಒಂಭತ್ತು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸರ ತಂಡ 10 ಓವರ್‌ಗಳಲ್ಲಿ 69 ರನ್‌ಗಳಿಸಿತು. ಪತ್ರಕರ್ತರ ತಂಡದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಪೊಲೀಸ್ ತಂಡದ ಆಟಗಾರರು ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲಿ. ಉತ್ತಮ ಕ್ಷೇತ್ರ ರಕ್ಷಣೆ ಕಾಪಾಡಿಕೊಂಡ ಪತ್ರಕರ್ತರ ತಂಡ ಪೊಲೀಸ್ ತಂಡ ಹೆಚ್ಚು ರನ್ ಸೇರಿಸದಂತೆ ಕಡಿವಾಣ ಹಾಕಿತು.
ನಂತರ ಬ್ಯಾಟಿಂಗ್ ಆರಂಭಿಸಿದ ಪತ್ರಕರ್ತರ ತಂಡ ಕೇವಲ ಆರು ಓವರ್‌ಗಳಲ್ಲಿ ನಿಗದಿತ ಗುರಿ ತಲುಪುವ ಮೂಲಕ ಸುಲಭವಾಗಿ ಗೆಲುವು ದಾಖಲಿಸಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರೀಶ, ಕುಮಾರಸ್ವಾಮಿ, ಡಿಪಿಎಸ್‌ಗಳಾದ ಶಾಂತವೀರ, ಪರಮಾನಂದ ಗೋಡ್ಕೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಿಪೋಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್, ಹಿರಿಯ ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಮಲ್ಲಿಕಾರ್ಜುನಯ್ಯ, ಸುರೇಶ ರೆಡ್ಡಿ, ಗೌಡಪ್ಪ ಗೌಡ, ಮಹಾನಂದ ನಾಯಕ, ಜಗನ್ನಾಥ ಪೂಜಾರ ಸೇರಿ ಅನೇಕರು ಇದ್ದರು.