- ರಾಯಚೂರಿನಲ್ಲಿ ರಕ್ತಕ್ಕಾಗಿ ರೋಗಿಗಳ ಪರದಾಟ
- ತುರ್ತು ಚಿಕಿತ್ಸೆಗೆ ದಾನಿಗಳ ಹುಡುಕಾಟ
- ಬಿಸಿಲಿನ ತಾಪಮಾನ ದಿನಕ್ಕೆ 40 ರಿಂದ 44 ಡಿಗ್ರಿ ಸೇ. ತಾಪಮಾನ ಹೆಚ್ಚಳ
ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪ ಜನ ಜೀವನವನ್ನು ತತ್ತರಿಸಿಸಿದೆ. ಇದರ ಪರಿಣಾಮವಾಗಿ, ಇದರಿಂದ ಜಿಲ್ಲೆಯ ಹಲವು ರಕ್ತ ನಿಧಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಾಪಮಾನ ಏರಿಕೆಯಿಂದಾಗಿ ರಕ್ತದಾನ ಮಾಡಲು ಹೆಚ್ಚಿನ ಜನರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರಕ್ತಕ್ಕಾಗಿ ಜಿಲ್ಲೆಯ ಜನ ಪರದಾಡುವಂತಾಗಿದೆ.
ಬಿಸಿಲನಾಡು ರಾಯಚೂರಿನಲ್ಲಿ ಬಿಸಿಲಿನ ತಾಪಮಾನ ದಿನಕ್ಕೆ 40 ರಿಂದ 44 ಡಿಗ್ರಿ ಸೇ. ತಾಪಮಾನ ಹೆಚ್ಚಳವಾಗುತ್ತಿದ್ದು, ಜನರಲ್ಲಿ ನಿರ್ಜಲಿಕರಣ ಸಮಸ್ಯೆ ಹೆಚ್ಚಳವಾಗಿ ಕಂಡುಬರುತ್ತಿದೆ. ಜತೆಗೆ ಬಿಸಿಲ ಝಳಕ್ಕೆ ಹೆದರಿದ ರಕ್ತ ದಾನಿಗಳು ರಕ್ತ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಅಪಘಾತ, ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ರಕ್ತದ ಸಮಸ್ಯೆ ಜಿಲ್ಲೆಯಲ್ಲಿ ಎದುರಾಗಿದೆ.
ಜಿಲ್ಲೆಯಲ್ಲಿ ಎಷ್ಟು ಬ್ಲಡ್ ಬ್ಯಾಂಕ್‌ಗಳು
ಜಿಲ್ಲೆಯಲ್ಲಿ ಎರಡು ಸರ್ಕಾರಿ ಹಾಗೂ 8 ಖಾಸಗಿ ಸೇರಿ ಒಟ್ಟು 10 ಬ್ಲಡ್ ಬ್ಯಾಂಕ್‌ಗಳಿದ್ದು, ಬಿಸಿಲಿನ ಝಳದಿಂದ ದಾನಿಗಳು ರಕ್ತ ನೀಡದಿರುವುದರಿಂದ ಸದ್ಯ ಎಲ್ಲಾ ಕಡೆಯಲ್ಲೂ ಕೂಡಾ ಸದ್ಯ ರಕ್ತದ ಕೊರತೆ ಕಂಡು ಬರುತ್ತಿದೆ.ಬೇಸಿಗೆ ಮೊದಲು ಮೊದಲು ಅನೇಕರು ಹುಟ್ಟಿದ ದಿನದ ಆಚರಣೆ, ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಹೆಚ್ಚಾಗಿ ಬ್ಲಡ್ ಕ್ಯಾಂಪ್‌ಗಳು ನಡೆಯುತ್ತಿತ್ತು, ಅಗತ್ಯಕ್ಕಿಂತ ಹೆಚ್ಚಿನ ರಕ್ತ ಸಿಗುತ್ತಿತ್ತು, ಆದರೆ ಬಿರು ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ಬ್ಲಡ ಕ್ಯಾಂಪ್‌ಗಳು ಕಡಿಮೆಯಾಗಿವೆ ಜೊತೆಗೆ ರಕ್ತದಾನಿಗಳ ಸಂಖ್ಯೆಯೂ ಕಡಿಮೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ 24 ಲಕ್ಷ ಜನಸಂಖ್ಯೆ ಇದೆ, ತಿಂಗಳಿಗೆ ಕನಿಷ್ಠ 500 ರಿಂದ 600 ಯೂನಿಟ್ ರಕ್ತ ಅವಶ್ಯಕತೆ ಇದೆ. ಪ್ರಮುಖವಾಗಿ ಮಹಿಳೆಯರ ಹೆರಿಗೆ ಸಂದರ್ಭದಲ್ಲಿ, ಅಪಘಾತವಾದಾಗ, ಮತ್ತು ಶಸ್ತ್ರಚಿಕಿತ್ಸೆ ವೇಳೆಯಲ್ಲಿ ರಕ್ತದ ಅವಶ್ಯಕತೆ ಇದೆ. ಅದರ ಜೊತೆಗೆ ವಿವಿದ ರೋಗಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ ಇಂಥ ಸಂದರ್ಭಗಳಲ್ಲಿ ರಕ್ತ ಬೇಕಾಗಿದೆ. ಆದರೆ ಜಿಲ್ಲೆಯಲ್ಲಿ 30 ರಿಂದ 40 ರಷ್ಟು ರಕ್ತದ ಕೊರತೆ ಕಂಡು ಬರುತ್ತಿದೆ. ಅಂದರೆ ತಿಂಗಳಿಗೆ 60 ರಿಂದ 80 ಯೂನಿಟ್ ರಕ್ತದ ಕೊರತೆ ಕಂಡು ಬರುತ್ತಿದೆ. ಅದ್ಯ ರಕ್ತದಾನಿಗಳ ಕೊರತೆ ಹಾಗೂ ಇತ್ತೀಚೆಗೆ ಬ್ಲಡ್ ಕ್ಯಾಂಪ್‌ಗಳು ನಡೆಯದೆ ಇರುವುದೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ನಗರದ ರಿಮ್ಸ್ ಸೇರಿದಂತೆ ಪ್ರತಿನಿತ್ಯ ಅಗತ್ಯವಿರುಷ್ಟು ರಕ್ತದ ಸಿಗುತ್ತಿಲ್ಲ. ಹಾಗಾಗಿಯೆ ನಗರದ ಐಎಂಎ, ರೆಡ್ ಕ್ರಾಸ್ ಸಂಸ್ಥೆಗಳಿಂದ ರಕ್ತ ತರಿಸಿಕೊಳ್ಳಲಾಗುತ್ತಿದೆ. ಇದರ ಬದಲಿ ರಕ್ತ ನೀಡುವುದು ಹಾಗೂ ರೋಗಿಗಳ ಸಂಬಂಧಿಕರು ರಕ್ತದಾನ ಮಾಡುತ್ತಿಲ್ಲ, ಬದಲಾಗಿ ರೋಗದಿಂದ ಗುಣಮುಖವಾದ ತಕ್ಷಣ ತಮಗೆ ಸಂಬಂಧವಿಲ್ಲದಂತೆ ಹೊರಟು ಹೋಗುತ್ತಾರೆ.
ಹಾಗಾಗಿ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ರಕ್ತದ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ.
ಯಾಕೆ ದಾನಿಗಳು ಹಿಂಜರಿತ
ಜಿಲ್ಲೆಯಲ್ಲಿ ಶೇ.70 ರಷ್ಟು ಜನರು ಕೃಷಿ ಅವಲಂಬಿತರಾಗಿದ್ದಾರೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ದಾಖಲೆಯಾಗಿರುವುದರಿಂದ ರಕ್ತ ನೀಡಿದರೆ ಸುಸ್ತು, ತಲೆಸುತ್ತು ಬರುವ ಭಯದಿಂದ ದಾನಿಗಳು ಮುಂದೆ ಬರುತ್ತಿಲ್ಲ. 2025 ರಿಂದ 2026 ಮಾಚ್ ಅಂತ್ಯದಲ್ಲಿ ಒಟ್ಟು 23208 ಯೂನಿಟ್ ರಕ್ತವನ್ನು ದಾನಿಗಳು ನೀಡಿದ್ದಾರೆ. ಆದರೆ ಬೇಸಿಗೆಯಲ್ಲಿ ರಕ್ತ ನೀಡುವುದರಿಂದ ಶೇ.20 ರಷ್ಟು ಯೂನಿಟ್ ರಕ್ತ ಕುಸಿದಿದೆ.
ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ನಿರ್ಜಲಿಕರಣ, ತಲೆ ಸುತ್ತು, ಸುಸ್ತು ಇರುವುದರಿಂದ ರಕ್ತ ನೀಡುವವರ ದಾನಿಗಳ ಸಮಸ್ಯೆ ಕಡಿಮೆಯಾಗಿದೆ.. ಅದರೆ ರೋಗಿಗಳಿಗೆ ಯಾವುದೇ ಸಮಸ್ಯೆ ಅಗದಂತೆ ಇಲಾಖೆ ನೋಡಿಕೊಳ್ಳುತ್ತಿದೆ. ಕೆಲವು ಸಂದರ್ಭದಲ್ಲಿ ರಕ್ತ ದೊರೆಯದಿದ್ದರೆ ರೋಗಿಯ ಸಂಬಂಧಿಯಿಂದ ರಕ್ತ ಪಡೆದು ಚಿಕಿತ್ಸೆ ನೀಡಲಾಗುತ್ತದೆ.
ಡಾ.ಸುರೇಂದ್ರ ಬಾಬು ಡಿಎಚ್‌ಓ ರಾಯಚೂರು