ಸಿಂಧನೂರಿನಲ್ಲಿ ಭಾನುವಾರ ಮತದಾರರ ವಿಶೇಷ ಪರಿಷ್ಕರಣೆ ಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಮತದಾರರ ವಿಶೇಷ ಪರಿಷ್ಕರಣೆ ಸಾಧಕ-ಬಾಧಕ ಕುರಿತು ಸಂವಾದ ಕಾರ್ಯಕ್ರಮವನ್ನು ಮಕ್ಕಳ ತಜ್ಞ ಡಾ.ಕೆ.ಶಿವರಾಜ ಉದ್ಘಾಟಿಸಿದರು. ಚಿಂತಕ ಶಿವಸುಂದರ್, ಸಮಿತಿ ಸಂಚಾಲಕರಾದ ಡಿ.ಎಚ್.ಕಂಬಳಿ, ಹುಸೇನಬಾಷಾ, ಸರಸ್ವತಿ ಪಾಟೀಲ್ ಇದ್ದರು. 
ರಾಯಚೂರು

ಮೂಲಭೂತ ಹಕ್ಕು ಕಸಿದರೆ ಗಂಭೀರ ಸಮಸ್ಯೆ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ತಜ್ಞ ಡಾ.ಕೆ.ಶಿವರಾಜ ಅನಿಸಿಕೆ
  • ಸಿಂಧನೂರಿನಲ್ಲಿ ಎಸ್‌ಐಆರ್ ಕುರಿತು ಸಂವಾದ
ಮೂಲಭೂತ ಹಕ್ಕು ಕಸಿದರೆ ಗಂಭೀರ ಸಮಸ್ಯೆ A serious problem if fundamental rights are violated
* ಮಕ್ಕಳ ತಜ್ಞ ಡಾ.ಕೆ.ಶಿವರಾಜ ಅನಿಸಿಕೆ  ಸಿಂಧನೂರಿನಲ್ಲಿ ಎಸ್‌ಐಆರ್ ಕುರಿತು ಸಂವಾದ 
ಸಿಂಧನೂರು: ಹಿಂದೆ ಮತದಾರರು ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ನಾಯಕನೇ ಇಂಥ ಮತದಾರರು ಬೇಕೆಂದು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಜಾರಿಯಾಗಿರುವುದು ಖೇದಕರ ಎಂದು ಮಕ್ಕಳ ತಜ್ಞ ಡಾ.ಕೆ.ಶಿವರಾಜ ಹೇಳಿದರು. 
ನಗರದ ಟೌನ್‌ಹಾಲ್‌ನಲ್ಲಿ ಭಾನುವಾರ ಮತದಾರರ ವಿಶೇಷ ಪರಿಷ್ಕರಣೆ ಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಸಾಧಕ-ಬಾಧಕ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾರರ ವಿಶೇಷ ಪರಿಷ್ಕರಣೆಯಿಂದ ನಿಜವಾದ ಮತದಾರ ಕೈಬಿಟ್ಟು ಹೋದರೆ ಜಡ್ಡುಗಟ್ಟಿದ ವ್ಯವಸ್ಥೆ ಬಲಗೊಳ್ಳಲಿದೆ. ಜನಸಾಮಾನ್ಯರ ಮೂಲಭೂತ ಹಕ್ಕು ಕಸಿದರೆ, ವ್ಯವಸ್ಥೆಯು ಬದಲಾಗಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.
ಮತದಾರನಾಗಲು ಭಾರತ ಪ್ರಜೆಯಾಗಿರಬೇಕು ಎಂದಿರುವುದು ಸರಿ. ಆದರೆ, ಮತದಾರರನ್ನು ತಿರಸ್ಕಾರ ಮಾಡುವ ಹಕ್ಕು ಯಾರಿಗೂ ಇಲ್ಲ. ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ತಾಲೂಕಿಗೆ ಬಂದ ಕೆಲವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ನಿಮಗೆ ಮತದಾನದ ಹಕ್ಕು ಕೊಡಿಸುವೆ, ನಮ್ಮ ಪರವಾಗಿ ಬೆಂಬಲಿಸಬೇಕೆಂಬ ಷರತ್ತು ಎಷ್ಟು ಸರಿ ? ಎಂದರು. 
ಚಿಂತಕ ಶಿವಸುಂದರ್ ಮಾತನಾಡಿ, ಮತದಾರರ ವಿಶೇಷ ಪರಿಷ್ಕರಣೆಯಿಂದ ಮತದಾನದ ಹಕ್ಕಿಗೆ ಗಂಡಂತಾರ ಎದುರಾಗಿದೆ. ಮೂಲಭೂತ ಹಕ್ಕು ಕಸಿಯುವ ಸಂಚು ನಡೆದಿದೆ. ಈ ಪರಿಷ್ಕರಣೆಯಲ್ಲಿ ಖೊಟ್ಟಿ ಮತದಾರರ ಕಿತ್ತು ಹಾಕಿ, 18 ವರ್ಷ ತುಂಬಿದ ಯುವಕರಿಗೆ ಮತದಾನದ ಹಕ್ಕು ನೀಡುವುದಾಗಬೇಕಿತ್ತು. ಆದರೆ, ನುಸುಳುಕೋರರಿಗೆ ಮತದಾನದ ಹಕ್ಕು ನೀಡಬಾರದೆಂಬ ನೆಪದಲ್ಲಿ ತಮ್ಮ ಚುನಾವಣೆಗೆ ಅವಕಾಶವಾಗುವಂತೆ ಮತದಾರರ ಯಾದಿ ಸಿದ್ಧಪಡಿಸುವ ವ್ಯವಸ್ಥೆ ನಡೆದಿದೆ. ವೋಟಿನ ಹಕ್ಕು ಕೊಡುವುದು ಕರ್ತವ್ಯ. ಆದರೆ, ಪರಿಷ್ಕರಣೆ ಹೆಸರಿನಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು. 
ಅಧ್ಯಕ್ಷತೆ ವಹಿಸಿದ್ದ ಸಮಿತಿ ಸಂಚಾಲಕ ಡಿ.ಎಚ್. ಕಂಬಳಿ, ಹುಸೇನಸಾಬ್ ಮಾತನಾಡಿದರು. ಕಸಾಪ ಮಾಜಿ ತಾಲೂಕು ಅಧ್ಯಕ್ಷೆ ಸರಸ್ವತಿ ಪಾಟೀಲ್ ಸಂವಿಧಾನ ಪೀಠಿಕೆ ಓದಿದರು. ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ, ಸಮಿತಿ ಸಂಚಾಲಕ ಚಂದ್ರಶೇಖರ ಗೊರೇಬಾಳ ಇದ್ದರು. ಎಂ.ಗಂಗಾಧರ ಸಂಗಡಿಗರು ಪ್ರಾರ್ಥಿಸಿದರು. ಮೌನೇಶ ಜಾಲವಾಡಗಿ ಸ್ವಾಗತಿಸಿದರು. ಶಂಕರ ಗುರಿಕಾರ ನಿರೂಪಿಸಿದರು.