ತಾಲೂಕಿನ ಎಲೆ ಬಿಚ್ಚಾಲಿಯ ರಾಯರ ಜಪದ ಕಟ್ಟೆ ಬಳಿಯ 6 ಕೋಣೆಗಳು ಹಾಗೂ ಗೋಶಾಲೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬೀಗ ಹಾಕಿರುವುದು. 
ರಾಯಚೂರು

ಏಕಶಿಲಾ ವೃಂದಾವನ ಬಳಿಯ ಕೋಣೆ,ಗೋಶಾಲೆಗೆ ಬೀಗ

ಪ್ರಮುಖ ಮುಖ್ಯಾಂಶಗಳು

  • ಮಂತ್ರಾಲಯ ಮಠಕ್ಕೆ ಆಸ್ತಿ ಒಪ್ಪಿಸಿದ ಅಧಿಕಾರಿಗಳು
  • ಏಕ ಶಿಲಾ ವೃಂದಾವನ
ರಾಯಚೂರು
ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿನ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನ ಬಳಿಯ ಜಾಗದ ವಿವಾದ ನಿಮಿತ್ತ ರಾಯರ ಜಪದ ಕಟ್ಟೆ ಬಳಿಯ 6 ಕೋಣೆಗಳು ಹಾಗೂ ಗೋಶಾಲೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬೀಗ ಹಾಕಿದ್ದಾರೆ.

ಗ್ರಾಮದ ಸರ್ವೆ ನಂ.35 ಮತ್ತು 37 ರ 2 ಎಕರೆ 33 ಗುಂಟೆ ಜಾಗಕ್ಕಾಗಿ ಮಂತ್ರಾಲಯ ರಾಯರ ಮಠ ಹಾಗೂ ಅರ್ಚಕರು, ರೈತರ ನಡುವೆ ವಿವಾದವಿತ್ತು. ಈ ಹಿಂದೆ ಸರ್ಕಾರ ಮಂತ್ರಾಲಯ ರಾಯರ ಮಠಕ್ಕೆ ಜಾಗ ಮಂಜೂರು ಮಾಡಿದ್ದು, ಇದರ ವಿರುದ್ಧ ಜಪದ ಕಟ್ಟಿ ಬಿಚ್ಚಾಲಿ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು.
ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದರಿಂದ ಕೋರ್ಟ್ ಸೂಚನೆಯಂತೆ ಅಧಿಕಾರಿಗಳು ಸ್ಥಳದ ಸರ್ವೆಯನ್ನು ಕಳೆದ ಏಪ್ರಿಲ್ 13 ರಂದು ಮಾಡಿದ್ದರು. ಯಾವುದೇ ನೋಟೀಸ್ ನೀಡದೆ ಸರ್ವೆ ಮಾಡಲಾಗಿದೆಂದು ಉಳುಮೆ ಮಾಡುತ್ತಿದ್ದ ಸ್ಥಳೀಯ ರೈತರು ಆಕ್ರೋಶ ಹೊರ ಹಾಕಿದ್ದರು.
ನ್ಯಾಯಾಲಯದ ಸೂಚನೆಯಂತೆ ರಾಯಚೂರು ಉಪ ವಿಭಾಗ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಹಶಿಲ್ದಾರ ಸುರೇಶ್ ವರ್ಮಾ ನೇತೃತ್ವದಲ್ಲಿ
ಜಾಗದ ಸರ್ವೆ ಮಾಡಿದ ಅಧಿಕಾರಿಗಳು ಕೋಣೆ ಹಾಗೂ ಗೋಶಾಲೆ ಬೀಗ ಹಾಕಿ ಮಂತ್ರಾಲಯ ಮಠಕ್ಕೆ ಆಸ್ತಿಯನ್ನು ಒಪ್ಪಿಸಲಾಗಿದೆ. ಏಕಾಏಕಿ ಕೋಣೆಗಳಿಗೆ ಬೀಗ ಹಾಕಲಾಗುತ್ತಿದೆಂದು ಅರ್ಚಕರ ಕುಟುಂಬಸ್ಥರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.