ಈಶ್ವರ ಕುಮಾರ ಕಾಂದೊ 
ರಾಯಚೂರು

ಗ್ರಾಮೀಣಾವೃದ್ಧಿಯ ಹೊಸ ಸಂಕಲ್ಪ ಉದ್ಯೋಗದ ಹೊಸ ಖಾತ್ರಿ

ರಾಯಚೂರು
ಕೇಂದ್ರ ಸರ್ಕಾರದ ನಿರ್ದೇಶನದಂತೆ ವಿಕಸಿತ ಭಾರತ ಜಿ ರಾಮ್ ಜಿ125 ದಿನಗಳ ಗ್ರಾಮೀಣ ಉದ್ಯೋಗದ ಖಾತ್ರಿ ಹೊಸ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸಿ ವಲಸೆ ತಡೆಯುವ ಮತ್ತು ಉದ್ಯೋಗ ಖಾತರಿಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆಂದು ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತಲೆದೋರಿರುವ ಬರದಿಂದ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ವಿಕಸಿತ ಭಾರತ ಜಿ ರಾಮ್ ಜಿ125 ದಿನಗಳ ಗ್ರಾಮೀಣ ಉದ್ಯೋಗದ ಖಾತ್ರಿ ಹೊಸ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ.
ಆದರೂ ಕೆಲವೆಡೆ ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದನ್ನು ತಡೆಯಲು ಹೆಚ್ಚಿನ ಜನರಿಗೆ ಸ್ಥಳೀಯವಾಗಿ ನಿರಂತರ ಕೆಲಸ ಒದಗಿಸುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ನಿರಂತರ ಉದ್ಯೋಗ ಒದಗಿಸಿ ಜೀವನ ಸಂಕಷ್ಟ ನೀಗಿಸುವ ಉದ್ದೇಶದಿಂದ ಜುಲೈ 01 ರಿಂದ ವಿಕಸಿತ ಗ್ರಾಮ ಪಂಚಾಯತಿಯಿಂದ ವಿಕಸಿತ ಭಾರತದೆಡೆಗೆ ಕಾರ್ಯಕ್ರಮಗಳನ್ನು ರಾಯಚೂರು ಜಿ.ಪಂ ವಿನೂತನ ಐಇಸಿ ಚಟುವಟಿಕೆಗಳ ಮೂಲಕ ಅಭಿಯಾನವನ್ನು 179 ಗ್ರಾ.ಪಂ ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.