ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ನಿಮಿತ್ತ ಮಸ್ಕಿಯಲ್ಲಿ ಶುಕ್ರವಾರ ಸಂಜೆ ಬಿಜೆಪಿ ಪದಾಧಿಕಾರಿಗಳು ಸಂಭ್ರಮಾಚರಣೆ ನಡೆಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಡಾ.ಬಿ.ಎಚ್.ದಿವಟರ್, ಮಲ್ಲಪ್ಪ ಅಂಕುಶದೊಡ್ಡಿ, ಶಿವಶಂಕ್ರಪ್ಪ ಹಳ್ಳಿ, ಪಂಪಣ್ಣ ಗುಂಡಳ್ಳಿ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಶ್ರೀನಿವಾಸ ಇಲ್ಲೂರು, ದೊಡ್ಡಪ್ಪ ಬುಳ್ಳಾ, ಶರಣಯ್ಯ ಸೊಪ್ಪಿಮಠ ಇತರರಿದ್ದರು.
- ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿಕೆ
- ಬಿಹಾರ ವಿಧಾನಸಭೆ ಚುನಾವಣೆ
ಮಸ್ಕಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರ ಆರೋಪಕ್ಕೆ ಅಲ್ಲಿನ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ನಿತೀಶ್-ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ದಿಗ್ವಿಜಯ ಸಾಧಿಸಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ದೈವದಕಟ್ಟೆ ಬಳಿ ಶುಕ್ರವಾರ ಸಂಜೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಮತಗಳ್ಳತನ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿತು. ಆದರೆ, ಇದಕ್ಕೆ ಬಿಹಾರದ ಮತದಾರರು ಕಿವಿಗೊಡದೆ ದೇಶದ ಭದ್ರತೆ, ಆರ್ಥಿಕ ಸದೃಢತೆಗೆ ಮನ್ನಣೆ ನೀಡಿ ಎನ್‌ಡಿಎಗೆ ಗೆಲುವು ನೀಡಿದ್ದಾರೆ. ಇದರಿಂದ ಕರ್ನಾಟಕದ ಕಾಂಗ್ರೆಸ್ಸಿಗರು ಪಾಠ ಕಲಿಯಬೇಕು. ಉಳಿದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದರು.
ಪ್ರಮುಖರಾದ ಸೂಗಣ್ಣ ಬಾಳೇಕಾಯಿ, ನಾಗರಾಜ ಯಂಬಲದ, ಸುರೇಶ ಹರಸೂರು, ಮಲ್ಲಿಕಾರ್ಜುನ ಬ್ಯಾಳಿ, ಭರತ, ವೆಂಕಟೇಶ ನಾಯಕ, ಮೌನೇಶ ನಾಯಕ, ಬಸವರಾಜ ಗುಡಿಹಾಳ, ಅಶೋಕ ಸಿಂಗ್ ಠಾಕೂರು, ಅಭಿಜಿತ್ ಮಾಲಿಪಾಟೀಲ್, ಮಸೂದ್ ಪಾಷಾ, ಶರಣಗೌಡ, ಪಂಪಣ್ಣ ಮಡಿವಾಳ, ಹನುಮೇಶ ಕುಲಕರ್ಣಿ, ಕಾಳಪ್ಪ ಪತ್ತಾರ ಇತರರಿದ್ದರು.