ಸಿಂಧನೂರು ತಾಲೂಕಿನ ಗಾಂಧಿನಗರ ಶಿವಾಲಯದಲ್ಲಿ ಅಖಂಡ ಭೂಮಿ ಫೌಂಡೇಷನ್ 5ನೇ ವಾರ್ಷಿಕೋತ್ಸವ, ಪದ್ಮಶ್ರೀ ತೆಲುಗು ಮೇರುನಟ ದಿ.ನಂದಮೂರಿ ತಾರಕ ರಾಮರಾವ್ ಜಯಂತಿ ಅಂಗವಾಗಿ ಮನೆಮನೆಗೆ ಪತ್ರಿಕೆ ಹಂಚುವ ಹುಡುಗರಿಗೆ ಉಚಿತವಾಗಿ ಸೈಕಲ್ ವಿತರಿಸಲಾಯಿತು. ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ, ಬಿಜೆಪಿ ಪ್ರಮುಖ ಕೊಲ್ಲಾ ಶೇಷಗಿರಿರಾವ್, ಅಖಂಡ ಭೂಮಿ ಫೌಂಡೇಷನ್ ತಾಲೂಕು ಅಧ್ಯಕ್ಷ ನೆಕ್ಕಂಟಿ ಸುರೇಶ, ಡಾ.ಶರಣಬಸವ ದೇವರಡ್ಡಿ, ಸೋಮನಗೌಡ ಬಾದರ್ಲಿ ಇತರರಿದ್ದರು. 
ರಾಯಚೂರು

ಮೇರುನಟರಿಂದ ಸಮಾಜಕ್ಕೆ ಅಪಾರ ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ತೆಲುಗು
  • ಮೇರುನಟ
  • ಮುಖ್ಯಮಂತ್ರಿ
ಸಿಂಧನೂರು: ಡಾ.ರಾಜಕುಮಾರ್ ಹಾಗೂ ಎನ್‌ಟಿಆರ್ ದಕ್ಷಿಣ ಭಾರತ ಚಿತ್ರರಂಗದ ಎರಡು ಕಣ್ಣಿದ್ದಂತೆ ಎಂದು ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಹೇಳಿದರು.
ತಾಲೂಕಿನ ಗಾಂಧಿನಗರದ ಶಿವಾಲಯದಲ್ಲಿ ಅಖಂಡ ಭೂಮಿ ಫೌಂಡೇಷನ್ 5ನೇ ವಾರ್ಷಿಕೋತ್ಸವ, ತೆಲುಗು ಮೇರುನಟ ದಿ.ನಂದಮೂರಿ ತಾರಕ ರಾಮರಾವ್ ಅವರ 103ನೇ ಜಯಂತಿ ಅಂಗವಾಗಿ ವಿಶ್ವೇಶ್ವರ ಸೇವಾ ಸಮಿತಿ, ವನಸಿರಿ ಫೌಂಡೇಷನ್, ವಿಶ್ವ ಹಿಂದು ಪರಿಷತ್ ಆಶ್ರಯದಲ್ಲಿ ಪಂಚವಟಿ ಸಸಿಗಳ ಪ್ರತಿಷ್ಠಾಪನೆ, ಸಸಿಗಳ ನೆಡುವುದು, ಪತ್ರಿಕೆ ವಿತರಕರಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್‌ಟಿಆರ್ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದ ಅನೇಕ ಯೋಜನೆಗಳನ್ನು ದೇಶದಾದ್ಯಂತ ಅನುಸರಿಸಲಾಗುತ್ತಿದೆ. ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಜನಮುಖಿ ಕೆಲಸಗಳನ್ನೇ ಹೆಚ್ಚಾಗಿ ಮಾಡಿದ್ದರಿಂದ ಎನ್‌ಟಿಆರ್ ಎಂದರೆ ಪ್ರತಿಯೊಬ್ಬರಿಗೂ ಗೊತ್ತು ಎಂದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಎನ್‌ಟಿಆರ್ ಅವರ ಜನಪರ ಕಾರ್ಯಗಳು ಇಂದಿಗೂ ಯುವ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿವೆ ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ಅಖಂಡ ಭೂಮಿ ಫೌಂಡೇಷನ್ ತಾಲೂಕು ಅಧ್ಯಕ್ಷ ನೆಕ್ಕಂಟಿ ಸುರೇಶ ಮಾತನಾಡಿದರು.
ಡಾ.ಶರಣಬಸವ ದೇವರಡ್ಡಿ, ಡಾ.ಚನ್ನನಗೌಡ ಆರ್.ಪಾಟೀಲ್, ಅರಣ್ಯ ಅಧಿಕಾರಿ ಬಸನಗೌಡ ಅಲ್ಲಿಪುರ, ತಾಳೂರಿ ಸುಬ್ಬಾರಾವ್, ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ, ವಿಶ್ವನಾಥ ಚೌಧರಿ, ಶ್ರೀನಿವಾಸ, ಪತ್ರಿಕೆ ವಿತರಕ ಸೋಮನಾಥ ಅಲಬನೂರು, ಜಾಲಿಹಾಳ ಗ್ರಂಥಾಲಯ ಮೇಲ್ವಿಚಾರಕ ನಾಗರಾಜ ಎನ್. ಇದ್ದರು. ಹೆಲ್ತ್ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಶ್ರೀ ಶಕ್ತಿ ರಕ್ತ ಭಂಡಾರದಿಂದ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು.