ಚಹಾಪುಡಿ ಕ್ಯಾಂಪ್‌ಗೆ ಅರಣ್ಯಾಧಿಕಾರಿ ಮಹೇಶ ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕ ಕೆಂಚಪ್ಪ, ಗ್ರಾಮದ ನಿವಾಸಿ ಸಿದ್ದಪ್ಪ ಇತರರಿದ್ದರು. 
ರಾಯಚೂರು

ಚಿರತೆ ದಾಳಿಗೆ ಕೋಣ ಕರು ಬಲಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಉಪ ವಲಯ
  • ಅರಣ್ಯಾಧಿಕಾರಿ
  • ಆವರಣ
ಮಾನ್ವಿ: ತಾಲೂಕಿನ ಚಹಾಪುಡಿ ಕ್ಯಾಂಪ್‌ನಲ್ಲಿ ಶನಿವಾರ ಚಿರತೆ ದಾಳಿ ನಡೆಸಿ ಕೋಣ ಕರುವನ್ನು ತಿಂದು ಹಾಕಿದೆ. ಗ್ರಾಮದ ನಿವಾಸಿ ಸಿದ್ದಪ್ಪ ಅವರ ಕರು ಬಲಿಯಾಗಿದೆ. ಮನೆ ಆವರಣದಲ್ಲಿ ಕಟ್ಟಿದ್ದ ಕರು ಮೇಲೆ ಚಿರತೆ ದಾಳಿ ನಡೆಸಿದೆ.
ಮಾಹಿತಿ ತಿಳಿದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮಹೇಶ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಕ್ಯಾಂಪ್‌ನ ಸುತ್ತ ಮುತ್ತ ಕೃಷಿ ಜಮೀನಿದ್ದು, ಗುಡ್ಡ ಪ್ರದೇಶವಿರುವುದರಿಂದ ಚಿರತೆ ಅಡಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ರಾತ್ರಿ ವೇಳೆ ಒಬ್ಬರೆ ತಿರುಗಾಡಬಾರದು. ಜಾನುವಾರುಗಳನ್ನು ಬಯಲಿನಲ್ಲಿ ಕಟ್ಟದೆ ಸುರಕ್ಷಿತವಾದ ಪ್ರದೇಶದಲ್ಲಿ ಕಟ್ಟಬೇಕು ಎಂದರು. ಪಶುವೈದ್ಯಾಧಿಕಾರಿ ಡಾ.ಅಭಿ ಕರುವಿನ ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ವರದಿ ನೀಡುವುದಾಗಿ ತಿಳಿಸಿದರು.