ಚಾಮರಸ ಮಾಲೀ ಪಾಟೀಲ್ 
ರಾಯಚೂರು

ಜು.21 ರಂದು 6ನೇ ರೈತ ಹುತಾತ್ಮ ದಿನಾಚರಣೆ

ರಾಯಚೂರು
ನರಗುಂದ-ನವಲಗುಂದ ರೈತ ಬಂಡಾಯಕ್ಕೆ 46 ವರ್ಷಗಳುಗತಿಸಿದ್ದು, ಜ.21 ರಂದು ಕೊಪ್ಪಳದ ಬಲ್ಡೋಟ ಕಂಪನಿ ಎದುರುಗಡೆ 46ನೇ ರೈತ ಹುತಾತ್ಮ ದಿನಾಚರಣೆ ಹಾಗೂ ಬೃಹತ್ ರೈತ ಸಮಾವೇಶ ಆಯೋಜಿಸಲಾಗಿದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಪ್ಪಳದ ಬಲ್ಡೋಟ ಕಂಪಯಿಂದ 20 ಕ್ಕೂ ಅಧಿಕ ಹಳ್ಳಿಗಳ ಜನರು ಬೆಳೆ, ಆರೋಗ್ಯ ಕಳೆದುಕೊಳ್ಳುವಂತಾಗಿದೆ. ಸರ್ಕಾರ ಮತ್ತೆ ಅಪಾಯಕಾರಿಯಾಗಿರುವ ಬಲ್ಡೋಟ ಕಂಪನಿಗೆ 54ಸಾವಿರ ಎಕರೆ ವಿಸ್ತರನೆಗೆ ಭೂಮಿ ನೀಡಲು ಮುಂದಾಗಿದ್ದು, ಅದರಿಂದ ಜು.21 ರಂದು ಕೆರೆ ರಕ್ಷಣಾ ಬೇಲಿ ತೆಗೆದು ಸಾರ್ವಜನಿಕ ಮುಕ್ತಗೊಳಿಸಲಾಗುತ್ತದೆ.
ಮುಖ್ಯಮಂತ್ರಿಗಳು, ಕಂದಾಯ ಸಚಿವರಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಎಲ್ಲಾ ಜಿಲ್ಲೆಗಳಿಂದ ರೈತರು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಮಳೆಯೂ ಆಗಿಲ್ಲ.
ಜಲಾಶಯಗಳಲ್ಲಿಯೂ ನಿರೀಕ್ಷಿತ ನೀರು ಸಂಗ್ರಹವಾಗಿಲ್ಲ. ತುಂಗಭದ್ರಾ ಮತ್ತು ನಾರಾಯಣಪುರು ಜಲಾಶಯಗಳಲ್ಲಿರುವ ನೀರು ಕುಡಿಯುವ ನೀರಿಗೆ ಮಾತ್ರ ಬಳಕೆಗೆ ನಿರ್ಧರಿಸಲಾಗಿದೆ. ಆದರೆ ಕಾಲುವೆಗಳೆಲ್ಲವೂ ಹೊಲಸಿನಿಂದ ತುಂಬಿದ್ದು ಸ್ವಚ್ಚತಾ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಹಾಗೂ ಮುಂಗಾರು ಬೆಳೆ ಸಂಪೂರ್ಣ ಕೈಕೊಟ್ಟಿದ್ದು ರಾಜ್ಯ ಸರ್ಕಾರ ಕೂಡಲೇ ಬರಗಾಲವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಕೆ.ಶಿವನಗೌಡ ನಾಯಕ ಜಲಾಶಯಗಳ ಜಾರಿಗೆ ಸಂಕಲ್ಪ ಸಮಾಗಮ ನಡೆಸುವದು ಕೇವಲ ನಾಟಕವಷ್ಟೇ. ಅಧಿಕಾರದಲ್ಲಿದ್ದಾಗ ಧ್ವನಿಯೆತ್ತದವರು ಈಗ ಜಲಾಶಯ ನಿರ್ಮಾಣಕ್ಕೆ ಹೋರಾಟ ಮಾಡುವದಾಗಿ ಹೇಳುದು ಜನರನ್ನು ದಾರಿತಪ್ಪಿಸುವ ಕೆಲಸ. ಜನರು ಎಚ್ಚರದಿಂದರಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಪ್ರಮುಖರಾದ ದೊಡ್ಡ ಬಸನಗೌಡ ಬಲ್ಲಟಗಿ, ಬೂದೆಯ್ಯಸ್ವಾಮಿ, ಹಾಜಿ ಮಸ್ತಾನ್, ಶಂಕರಪ್ಪ, ದೇವರಾಜ ನಾಯಕ ಇದ್ದರು.