ರಾಯಚೂರು
ತಾಲೂಕಿನ ಹಂಚಿನಾಳ ಕ್ಯಾಂಪ್ ಹತ್ತಿರದ ಪೆಟ್ರೋಲ್ ಬಂಕ್‌ನಲ್ಲಿ ಹಣದ ವಿಚಾರವಾಗಿ ಜಗಳ ಬಿಡಿಸಲುಹೋದ ವ್ಯಕ್ತಿ ಕೊಲೆಗೆ ಸಂಬಂಧಿಸಿ ಇಡಪನೂರು ಪೊಲೀಸರು 6 ಜನರನ್ನ ಬಂಧಿಸಿದ್ದಾರೆ.
ಪೆಟ್ರೋಲ್ ಹಾಕಿಸುವ ವೇಳೆ 10 ರೂಪಾಯಿಗಾಗಿ ಶುರುವಾದ ಜಗಳ ಹೊಡೆದಾಟಕ್ಕೆ ತಿರುಗಿದೆ. ಇದೆ ವೇಳೆ ಪೆಟ್ರೋಲ್ ಬಂಕ್‌ಗೆ ಬಂದ ಗಿಲ್ಲೆಸುಗೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೇಘನಾಥ್ (42)ಜಗಳ ಬಿಡಿಸಲು ಮುಂದಾದಾಗ ಎರಡು ಕಡೆ ಹೊಡೆದಾಟದಲ್ಲಿ ದೊಣ್ಣೆಯಿಂದ ಮೇಘನಾಥ್ ತಲೆಗೆ ಬಲವಾದ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದನು.
ಈ ಕುರಿತು ಮೃತ ಮೇಘನಾಥ್ ಪತ್ನಿ ನೀಡಿದ ದೂರಿನ ಮೇರೆಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೌರ್ಜನ್ಯ ತಡೆ, ಕೊಲೆ ಆರೋಪದಡಿ ದೂರು ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನ ಆರೋಪಿಗಳಾದ ರವಿ , ವೀರೇಶ್ , ನರಸಿಂಹ, ಮಾರೆಪ್ಪ , ರಮೇಶ್ ಹಾಗೂ ಪ್ರವೀಣ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.